ಸುಕನಸು ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಸುಕನಸು

ಗಜಲ್

ನನ್ನ ನೆಮ್ಮದಿಯ ತಾಣ ನನ್ನವನು
ನನ್ನ ಸಂತಸಕೆ ಕಾರಣ ನನ್ನವನು

ರಸಿಕ ಮನದ ಶೃಂಗಾರ ಮನ್ಮಥ
ಸ್ವರ್ಗ ಜೀವನಕೆ ಪ್ರಾಣ ನನ್ನವನು

ಅಮರ ಅನುರಾಗ ಸವಿ ಉಣಿಸಿದ
ಬರಡು ಬಾಳಿಗೆ ಹೂರಣ ನನ್ನವನು

ಕದಡುವುದು ಮನಸು ದಾರಿ ಕಾಣದೆ
ಕಷ್ಟಗಳ ನೀಗಿಸಲು ತ್ರಾಣ ನನ್ನವನು

ಮಲ್ಲಿಗೆ ಸುಮ ಸುಗಂಧ ಮರೆತಂತಿತ್ತು
ಕಲ್ಲಿಗೆ ಒಲವ ಕಲಿಸಿದ ಜಾಣ ನನ್ನವನು


ಸುಕನಸು

Leave a Reply

Back To Top