ಕಾವ್ಯ ಸಂಗಾತಿ.
ಪ್ರಭಾ ಅಶೋಕ ಪಾಟೀಲ
ಉತ್ತರ ನೀಡಬೇಕಿದೆ
ಮನವದು ನೊಂದು ಬೆಂದಾಗ
ಕಂಡ ಕನಸು ಒಡೆದು ಹೋದಾಗ
ಆತ್ಮೀಯರೇ ದೂರಸರಿದಾಗ
ಭಾವಯಾನದಲಿ ಒಂಟಿಯಾದಾಗ
ಬದುಕದು ಭಾರವಾಗಿದೆ
ನೆಮ್ಮದಿಯು ಅಳಿದಾಗಿದೆ
ಮಾತದು ಮೌನವಾಗಿದೆ
ಹೃದಯವದು ಘಾಶಿ ಯಾಗಿದೆ
ಹಗಲದು ಭಾರವಾಗಿದೆ
ರಾತ್ರಿ ಅದು ಕಳೆಯದಾಗಿದೆ
ಮೋಸದಾಟಕ್ಕೆ ಸಿಲುಕಾಗಿದೆ
ಜೇ ಡರ ಬಲೆ ಬಿಡಿಸಿಕೊಳ್ಳಬೇಕಿದೆ
ಹೃದಯಕೆಮಲಾಮು ಹಚ್ಚಬೇಕಿದೆ
ಎನ್ನ ಮನವ ಸಂತೈಸ ಬೇಕಿದೆ
ದೃಢ ನಿರ್ಧಾರದಿ ಎದ್ದೆಳಬೇಕಿದೆ
ಗುರಿಯ ತಲುಪಿ ಗೆಲ್ಲಬೇಕಿದೆ
ಪರರಿಗೆ ಮಾದರಿ ನಾ ಆಗಬೇಕಿದೆ
ಜಗಕೆ ಉತ್ತರವ ನೀಡಬೇಕಿದೆ
ನನ್ನ ತನವ ಮೆರೆಯಬೇಕಿದೆ
ಶಾಂತತೆಯಲಿ ಬಾಳಿ ಬದುಕಬೇಕಿದೆ
————————————————-
ಪ್ರಭಾ ಅಶೋಕ ಪಾಟೀಲ