ಕಿಶೋರ್ ಕುಮಾರ್ ಎಕ್ಕಾರ್ ಕವಿತೆ

ಕಾವ್ಯ ಸಂಗಾತಿ

ಕಿಶೋರ್ ಕುಮಾರ್ ಎಕ್ಕಾರ್

ಕವಿತೆ

ಬೇಡವೆಂದರೂ
ನಿನ್ನ ಹೆಸರ
ಬರೆಯುತಿದೆ ನನ್ನ ಲೇಖನಿ…
ಕೂಗಬೇಡವೆಂದರೂ
ನಿನ್ನ ಹೆಸರ ಕರೆಯುತಿದೆ
ನನ್ನ ದನಿ…

ಹಾಳೆಯೇಕೋ
ನಿನ್ನ ಬಗ್ಗೆ ಬರೆದರೆ
ಮಾತ್ರ ಸ್ಪಂದಿಸುತ್ತೆ…
ಪದಗಳು ನಿನ್ನ
ಅಂದವ ಹೊಗಳಲು
ಸಾಲುಗಟ್ಟಿ ನಿಲ್ಲುತ್ತೆ…

ನಿನ್ನ ಗೆಜ್ಜೆಯ
ದನಿವೊಂದಿದ್ದರೆ ಸಾಕು
ಬೇರೆ ಯಾವ ನಾದವು ಕೇಳದು…
ನಿನ್ನ ಆ ಅಂದದ ನಗು
ಆ ಚಂದಿರನಿಂದ ಬಂದ
ಬೆಳದಿಂಗಳ ಆಸ್ತಿಯದು….

ಎಷ್ಟೊಂದು ಮೋಡಿ
ಮಾಡಿರುವೆ ಪ್ರಕೃತಿಯ
ವಿಸ್ಮಯಗಳಿಗೆ…
ನಿನ್ನ ಅಂದದ ವಿಸ್ಮಯವೇ
ನನ್ನ ನಾನೇ ಮರೆಯುವಂತೆ
ಮಾಡುವುದು ಅರೆಗಳಿಗೆ….

ಹೆಣ್ತನದ ರಮಣೀಯತೆ
ನನ್ನ ನಿನ್ನೊಳಗೆ
ಆಮಂತ್ರಿಸಿದೆ….
ನನ್ನ ಮನದ ಮಂದಿರದಲ್ಲಿ
ನಿನ್ನನ್ನೆ ಭಾವನೆಗಳು
ಪೂಜಿಸುತ್ತಿದೆ…..


ಕಿಶೋರ್ ಕುಮಾರ್ ಎಕ್ಕಾರ್.

Leave a Reply

Back To Top