ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ
ಗಜಲ್
ಕವಿತೆಗಾಗಿ ಬರಿದೆ ಕಾನನವೇಕೆ ಬೇಕು
ರವಿಯ ಸೋಲಿಸಿದ ಆನನವೇಕೆ ಬೇಕು
ಅವರಿವರು ಹೇಗೆ ಬೇಕಾದರೂ ಬರೆಯಲಿ
ಭಾವನೆಯ ಎರಕಕ್ಕೆ ದೇಣೆಗೆಯೇಕೆ ಬೇಕು
ಹಳಿಯು ಸರಿಯಾಗಿರಲಿ ಉಗಿಬಂಡಿಗೆ
ಹಳಸನ್ನವ ಉಣುವ ಮತಿಯಾಕೆ ಬೇಕು
ಗೊತ್ತಿದ್ದೂ ಮಾಡುವ ತಪ್ಪಿಗೆ ಮದ್ದೆಲ್ಲಿದೆ
ಬರೆಸಿ ಬರೆದೆನೆನ್ನುವ ಉಪಾಧಿಯೇಕೆ ಬೇಕು
ಹೆಸರಿಗಾಗಿ ಒಟ್ಟಾರೆ ಬಸಿರಾದರೆ ಹೇಗೆ ಈಶಾ
ಅರಿತು ಬರೆವ ನುರಿತವಗೆ ಸೆಡವೇಕೆ ಬೇಕು
ಡಾ ಸುರೇಶ ನೆಗಳಗುಳಿ
Thank you