ಲತಾ ಎಲ್. ಜಿ. ಅವರ ಕಲಾ ಕುಶಲತೆ

ಕಲಾ ಸಂಗಾತಿ

ಲತಾ ಎಲ್. ಜಿ. ಅವರ ಕಲಾ ಕುಶಲತೆ

ಕಲೆ ಸಂಸ್ಕೃತಿ ದೈವ ಭಕ್ತಿಯ ನೆಲೆವೀಡಾದ ನಮ್ಮ ನಾಡು ಕಲೆಗೆ  ಹೆಚ್ಚು ಪ್ರಾಮುಖ್ಯತೆ ನೀಡುವ ದೇಶವೆಂಬುದು ಹೆಮ್ಮೆಯ ಸಂಗತಿ,  ಹಾಸನ ಜಿಲ್ಲೆ  ಕಲೆಯ ತವರೂರು ಎಂದು ಹೆಸರುವಾಸಿ.  ಈ ಜಿಲ್ಲೆಯ  ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರು,  ಅಂತರಾಷ್ಟ್ರೀಯ ಕಲಾವಿದರಾದ  ಶ್ರೀ  ಕೆ ಟಿ ಶಿವಪ್ರಸಾದ್ ಅವರ ಜನ್ಮಸ್ಥಳ ಹಾಸನ ಜಿಲ್ಲೆಯಲ್ಲಿ ಕಲಾವಿದರಿಗೇನು ಕಡಿಮೆ ಇಲ್ಲ.
ಕಲೆಯನ್ನು ಬೆಳೆಸುತ್ತಾ ಪೋಷಿಸುತ್ತಾ ಪ್ರೋತ್ಸಾಹಿಸುತ್ತಾ ಹಲವಾರು ಕಲಾವಿದರು  ಜಿಲ್ಲೆಯಲ್ಲಿ ಇದ್ದಾರೆ. ಅದೇ ತರಹ ಹಲವರು ಹೆಣ್ಣು ಮಕ್ಕಳು ಕಲೆಯನ್ನು  ಬೆಳೆಸುತ್ತಾ ಪೋಷಿಸುತ್ತಾ   ಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾ ಬೆಳಕಿಗೆ ಬಾರದೆ  ಎಲೆ ಮರೆಯ ಕಾಯಿ ರೀತಿಯಲ್ಲಿ ಕಲೆಯ ವೃತ್ತಿಯನ್ನು ಆರಾಧಿಸುವರು ಇರುವರು. ಅವರಲ್ಲಿ ಒಬ್ಬರಾದ ಎಲ್.ಜಿ. ಲತಾ ಅವರು ಹಾಸನ ಜಿಲ್ಲೆಯ      ಲಕ್ಕನಾಯಕನಹಳ್ಳಿ  ಗ್ರಾಮದಲ್ಲಿ ಶ್ರೀಮತಿ ಲಕ್ಷ್ಮಮ್ಮ ಶ್ರೀ ಗುರುವೇ ಗೌಡ ಅವರ ಸುಪುತ್ರಿಯಾಗಿ ಜನಿಸಿ  ಪ್ರೈಮರಿ ಶಾಲೆಯನ್ನು ಹುಟ್ಟೂರು                       ಲಕ್ಕನಾಯಕನಹಳ್ಳಿ ಮುಗಿಸಿ ಪ್ರೌಢಶಾಲೆ ಅರುಣೋದಯ ಶಾಲೆಯಲ್ಲಿ  ಮುಗಿಸಿದರು.  ಬಾಲ್ಯದಲ್ಲಿ ಅಷ್ಟೇನೂ ಚಿತ್ರಕಲೆಯ ಬಗ್ಗೆ ಆಸಕ್ತಿ ಇರಲಿಲ್ಲ. ಆದರೂ  ಮುಂದಿನ ವಿದ್ಯಾಭ್ಯಾಸಕ್ಕೆ ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡು  ಹಾಸನದ ಶಾಂತಲಾ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರ  ತರಬೇತಿ ಮುಗಿಸಿ ನಂತರ ಅದೇ  ಕಾಲೇಜಿನಲ್ಲಿ    ಚಿತ್ರಕಲಾ ಶಿಕ್ಷಕಿಯಾಗಿ 17- 18 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿರುವರು.  ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಇವರ ಮಾರ್ಗದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಕರ ತರಬೇತಿ ಮುಗಿಸಿ ಹಾಸನದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಈ ರೀತಿ ಕಲೆಯನ್ನು ಬೆಳೆಸುತ್ತಾ  ಪೋಷಿಸುತ್ತಾ ಬಂದಿರುವರು.  ಕಲಾ ಕೃತಿಗಳನ್ನು  ರಚಿಸುವುದರಲ್ಲಿಯೂ  ಇವರು ತುಂಬಾ ಆಸಕ್ತಿ ಹೊಂದಿ ಸೃಜನಶೀಲ ಕಲಾಕೃತಿಗಳನ್ನು ತಮ್ಮ ಕೈ ಚಳಕದಿಂದ ರಚಿಸುತ್ತಾ ಬಃದಿದ್ದಾರೆ. ಇವರು ರಚಿಸಿರುವ ಕಲಾಕೃತಿಗಳಲ್ಲಿ ಬುದ್ಧನ ಕಲಾಕೃತಿಗಳು, ಆಫ್ರಿಕನ್ ಟ್ರೆಡಿಶನಲ್  ಪೇಂಟಿಂಗ್ ಪಕ್ಷಿಯ ಚಿತ್ರಗಳು ತುಂಬಾ ಕಲಾತ್ಮಕವಾಗಿ ರೂಪು ತಳೆದು ಇವರ ಪ್ರತಿಭೆಯನ್ನು ಸಾಕ್ಷೀಕರಿಸಿವೆ.  ಲತಾ ಅವರಿಗೆ ಅತಿ ಪ್ರಿಯವಾದ ಪೇಂಟಿಂಗ್ ಎಂದರೆ ಬುದ್ಧನ ಪೇಂಟಿಂಗ್. ಬುದ್ಧನ ಕಲಾಕೃತಿಯಲ್ಲಿ ತುಂಬಾ  ನೈಜವಾಗಿ ಬಣ್ಣ ಹಾಕುವ ಇವರು ಬುದ್ಧನ ಮುಖಭಾವದಲ್ಲಿ ಮುಗ್ಧತೆಯನ್ನು ಚಿತ್ರಿಸುವಲ್ಲಿ ಇವರು ಬುದ್ಧನ ಸರಳತೆ, ಮುಗ್ದತೆ, ಸೌಮ್ಯ ಸ್ವಭಾವ ಇಷ್ಟಪಟ್ಟು ಅದೇ ರೀತಿ ಬುದ್ದನ  ಕಲಾಕೃತಿ ರಚಿಸುವಲ್ಲಿ ಸಿದ್ಧಹಸ್ತರು.
   ಶಾಂತಿ ಸಂಕೇತವಾದ ಪಾರಿವಾಳ ಮತ್ತು ಕಮಲದ ಹೂವು ಇವರು ರಚಿಸುವ ಬುದ್ಧನ ಕಲಾಕೃತಿಗೆ ಅಳವಡಿಸಿಕೊಂಡಿರುತ್ತಾರೆ. ಬುದ್ಧನ ಕಲಾಕೃತಿಯನ್ನು ವಿವಿಧ ಬಣ್ಣಗಳಿಂದ ಹಲವು ಶೈಲಿಯಲ್ಲಿ  ರಚಿಸಿ ಪ್ರದಶಿ೯ಸಿ ಕಲಾಸಕ್ತರ ಮನ ಸೆಳೆದಿದ್ದಾರೆ.
ಪಕ್ಷಿಯ ಚಿತ್ರಗಳಲ್ಲೂ ಕೂಡ ನೈಜವಾಗಿ ಎಳೆಎಳೆಯಾಗಿ ಚಿತ್ರಿಸುವ ಕಲೆಗಾರಿಕೆ ಲತಾ ಅವರಿಗೆ ಒಲಿದಿದೆ.   ಆಫ್ರಿಕನ್  ಟ್ರೆಡಿಶಿನಲ್
ಪೈಂಟಿಂಗ್ ಕೂಡ ಇವರದೇ  ಶೈಲಿಯಲ್ಲಿ ಅಲಂಕಾರಿಕ ರೂಪು ತಳೆದಿವೆ. ಹದಿನೈದು ಗ್ರೂಪ್ ಶೋಗಳಲ್ಲಿ ಇವರು ತಮ್ಮ ಕಲಾಕೃತಿಗಳನ್ನು ಪ್ರದಶಿ೯ಸಿದ್ದಾರೆ. ಆಗೆಲ್ಲಾ ಇವರ ಪೇಂಟಿಂಗ್ ಬಗ್ಗೆ ನನಗೆ ತಿಳಿದ ಮಟ್ಟಿಗೆ ಬರೆದಿದ್ದೇನೆ. ಮೇಡಂ ಬಿಡುವಿನ ವೇಳೆಯಲ್ಲಿ ಎಲ್. ಕೆ.ಜಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಹಾಗೂ ಅಸಕ್ತಿ ಇರುವ ಮಹಿಳೆಯರಿಗೆ ಚಿತ್ರಕಲೆಯನ್ನು ಕಲಿಸುತ್ತಾ ಚಿತ್ರಕಲೆಯನ್ನು ಬೆಳೆಸುತ್ತಾ ಪ್ರೋತ್ಸಾಹಿಸುತ್ತಾ ಇದ್ದಾರೆ.

———————————-

ಗೊರೂರು ಅನಂತರಾಜು

Leave a Reply

Back To Top