ಡಾ. ಬಸಮ್ಮ ಗಂಗನಳ್ಳಿ ಅನುಭಾವಿ ಅಕ್ಕ

ಕಾವ್ಯಸಂಗಾತಿ

ಡಾ. ಬಸಮ್ಮ ಗಂಗನಳ್ಳಿ

ಅನುಭಾವಿ ಅಕ್ಕ

ಚಿಕ್ಕವಳಾದರೂ ನೀ
ಆದೆ ಅಕ್ಕ ಎಲ್ಲರಿಗೂ
ಮಕ್ಕಳಾಟದ ಮದುವೆಯಲಿ
ನೀ ಚೆನ್ನನಿಗೊಲಿದೆ ಭಾವದಲಿ
ಮುನ್ನ ಮಾಡಿದ ನಿಯಮಗಳೆಲ್ಲವ ಮೀರಿ
ಅರಮನೆಯ ಭವಿಯ ತೊರೆದು
ಕಲ್ಯಾಣದ ಅನುಭಾವಿಗಳ ಕೂಡಿಕೊಂಡೆ ನೀ
ಸ್ವಾನುಭವದಿ ವಚನವ ಬರೆದು
ಆಧ್ಯಾತ್ಮದಿ ಅಲ್ಲಮನ ಮೀರಿಸಿದ ಧೀರ,ದಿಟ್ಟೆ ನೀ
ನಡೆದೆ ಶ್ರೀಶೈಲದ ಕದಳಿಯೆಡೆ
ಘೋರಾರಣ್ಯದ ಪಶು-ಪಕ್ಷಿ ಮೃಗ ಸಂಕುಲಗಳ ಸಖ್ಯತೆ
ಗಿರಿ ಗಂವ್ವರಗಳ,
ಪರ್ವತಗಳ ಹತ್ತಿ ಇಳಿದು
ಹೊಳೆ-ಹಳ್ಳ- ತೊರೆಗಳ ತೀರ್ಥದಿ ಮಿಂದು
ಶಯನಕೆ ಪ್ರಕೃತಿಯ
ಮಡಿಲಿನ ದೇಗುಲವು
ಹಸಿವಿಗೆ ಹಣ್ಣು-ಹಂಪಲ ಮೆದ್ದು, ಆತ್ತಸಂಗಾತ್ಮಗೆ
ನಿತ್ಯದಿ ನೆನೆದು
ಹರುಷಗೊಂಡು ಹಾಡುತ ನೀ
ನಿನ್ನ ಪುರುಷ ಚೆನ್ನನ ಕೂಡಿ ಬಯಲಾದೆ
ಜಗಕ್ಕೊಬ್ಬಳೇ ಅಕ್ಕ ನೀನಾದೆ

 ----------------------------------------
ಡಾ. ಬಸಮ್ಮ ಗಂಗನಳ್ಳಿ

Leave a Reply

Back To Top