ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಪತ್ತಾರ
ಕೆಂಪು ನದಿ
ಎಲ್ಲೂ ಕಾಡಿನ ಒಂದು ಮೂಲೆಯಲ್ಲಿ
ಸಣ್ಣ ತೊರೆಯಾಗಿ ಹರಿಯುತ್ತಿದ್ದ ಕ್ರೂರ
ಕೆಂಪು ಹಳದಿ ಮಿಶ್ರಿತ ಝರಿ
ಇಂದು ನದಿಯಾಗಿ ಊರಿನ ಅಂಚಿಗೆ ಬಂದು ತನ್ನ ಹರಿವು ಹೆಚ್ಚಿಸುತ್ತಾ ಹೆಚ್ಚಿಸುತ್ತಾ
ಊರೆಲ್ಲಾ ವ್ಯಾಪಿಸುತ್ತಿದೆ
ಈ ನದಿಯ ನೀರು ಕುಡಿದು ಸಾಧು ಸಾಕು ಪ್ರಾಣಿಗಳು ಕ್ರೂರವಾಗಿ ಹಸುಳೆ, ಅಸಹಾಯಕರನ್ನು ಕಚ್ಚಿ ಕಚ್ಚಿ ತಿನ್ನುತ್ತಿವೆ
ಇನ್ನು ಮನುಷ್ಯರು ಮನುಷ್ಯತ್ವ ಕಳೆದುಕೊಂಡು ಕ್ರೂರ ಮೃಗಗಳಾಗಿದ್ದಾರೆ.
ಮಾನವರಿಗಂತೂ ಈ ನೀರಿನ ರುಚಿ ತುಂಬಾ ಹೆಚ್ಚಿದೆ
ಶುದ್ಧ ಸಾತ್ವಿಕ ಆಹಾರ, ಜೀವ ಜಲದಲ್ಲೂ ಅದರದೇ ಕಲಬೆರಕೆ.
ಮುಂದೊಂದು ದಿನ ಈ ಕೆಂಪು ನದಿ ಪ್ರಭಾವದಿಂದ ಊರು ಕಾಡಾಗುತ್ತದೆ
ಕಾಡೆ ಸಭ್ಯರ ಪಾಲಿಗೆ ವಾಸಿ ಎನಿಸಿತ್ತದೆ
ಲಕ್ಷ್ಮೀದೇವಿ ಪತ್ತಾರ
True lines akka