ಕಾವ್ಯ ಸಂಗಾತಿ
ಪ್ರಮೋದ ಜೋಶಿ
ದಂತಕಥೆಯಾದ ಬೆಂದ ತಾಯಿ
ಚಿಂದಿ ಎಂದರೂ ಚಿಂದಿಯಾಗದೆ
ಚಿಂದಿಯಾದ ಜೀವಿಗಳಿಗೆ
ಕೌದಿಯಾದರು ಸಿಂಧು ತಾಯಿ
ಹಿದಿದವನು ಬಿಟ್ಟರೂ
ಹಿಡಿದವರನು ಹಿಡಿದರು
ಹಿದಿದವರ ಜೊತೆಗೆ ಹಿಡಿದವನಿಗೂ
ದಾತೆಯಾದರು ಸಿಂಧು ತಾಯಿ
ಮರಾಠಾ ರಾಜ್ಯದ
ಮೇಗೆ ಗ್ರಾಮದಿ ಹುಟ್ಟಿ
ಹೆತ್ತವರಿಗೂ ಬೇಡವಾದ
ಮಗುವಾದರು
ಹೆಣ್ಣಾದ ತಪ್ಪಿಗೆ ಹಣ್ಣಾಗಿ ಹೋಯಿತು
ಬಡತನದ ಮನೆಯಲ್ಲಿ ಹುಟ್ಟಿ
ಇಟ್ಟ ಹೆಸರು ಕರೆಯದಂತೆ
ಚಿಂದಿ ನಾಮದಿ ಬೆಳಯಿತು
ಕಲಿಯುವ ಮನಸಿದ್ದರೂ
ವರ್ತಮಾನದಹಿಂದೆಳತಕೆ ಛಲ ಬೆಳೆಯಿತು ಎಮ್ಮೆ ಮೇಯುವ ಹೊತ್ತಿನಲ್ಲಿ
ಇವಲ ಶಿಕ್ಷಣ ನಡೆಯಿತು
ದೊರಕದ ಅವಕಾಶಕ್ಕೆ
ಹಾಳೆ ಚೂರಿನೊಳ ಅಕ್ಷರ ಓದಿ
ಜ್ಞಾನದ ದಾಹ ನೀಗಿಸುತ್ತ
ತನ್ನ ಕಾಯಕದೊಳಗೆ ಇದ್ದಳು
ವಯಸ್ಸು ಈಗ ಹತ್ತಾಯಿತು
ಮದುವೆ ಮಾಡಿ ಬಿಟ್ಟರು
ಗಂಡನಿಗೆ ಇತ್ತು ಮುವತ್ತು
ಸಂಸಾರದಲಿ ಹುಡುಗಿ ಬಿತ್ತು
ಬಡತನದ ಉಡುಗೊರೆ
ಅರೆಯದ ಊರು
ನಡೆಯಿತು ಹಾಗೆ ಸಂಸಾರದ ಗೋಳು
ಇಪ್ಪತ್ತರೊಳು ಹೆತ್ತಳು ಮೂರು ಮಕ್ಕಳು
ಹಾಳೆ ಚೂರಿನ ಅಕ್ಷರ ಓದುತ್ತ
ಹಾಗೆ ಸಾಗಿಸಿದಳು ಸಂಸಾರ
ಸರಿಕರೊಂದಿಗೆ ಕಾಕುಳ್ಳ ಅರಿಸುತ್ತ
ಕಾಡಿನಲಿ ಅಲೆದಾಡುತ್ತ
ಬುಟ್ಟಿ ಬುಟ್ಟಿ ಹೊತ್ತು ತಂದು
ಗುತ್ತೇದಾರನ ಅಂಗಳದಿ ಹಾಕಿದರು
ದೊರಕದ ಕೂಲಿಗೆ ಗುಟುರು ಹಾಕಿದಳು
ಗುತ್ತೇದಾರಗೆ ಅಳುಕದೆ
ಕೇಳದ ಚಿಂದಿ ನಡದೇಬಿಟ್ಟಳು
ಜಿಲ್ಹಾಧೀಕಾರಿ ಕಛೇರಿಗೆ
ಸಾಹೇಬರಲ್ಲಿ ಅರಿಕೆ ಮಾಡಿ
ಕರೆಸಿದಳು ಅವರನ್ನು ತನ್ನೂರಿಗೆ
ಗುತ್ತೆದಾರನ ಕರೆಸಿ ಬೈದು
ಕೂಲಿ ನೀಡಲು ಹೇಳಿದರು
ದೊರೆತ ಕೂಲಿಗೆ ಸಂತಸ ಹೆಚ್ಚಲು
ಚಿಂದಿಯನು ಹರಿಸಿ ಹಾರೈಸಿದರು
ಹೆಣ್ಣಿಂದಾದ ಅವಮಾನ ಸಹಿಸದೆ
ಕಳಂಕಿತಳಾಗಿಸಿದ ಇವಳನ್ನೆ
ಊರನ್ನೆ ಬಿಡುವಂತೆ ಮಾಡಿ
ಗಂಡನಿಂದ ದೂರಾಗಿಸಿದ
ಕೇಳದ ಚಿಂದಿ ದುರ್ಗಿಯಾದಳು
ಅವನ ಕಣ್ಣಿಗೆ ಜಿಂಕೆಯಾದವಳು
ಇವಳ ಸಂಗ ಬಯಸಿದ ಅವಗೆ
ಚಂಡಿರೂಪದಿ ಸೊಕ್ಕಿಳಿಸಿದಳು
ಒಂಟಿ ಹೆಣ್ಣು ವಯಸಿನ ದೇಹ
ಹೆದರಿದರೂ ಹೆದರಿಕೆ ಅಟ್ಟಿದಳು
ಹಸಿದ ಹೊಟ್ಟೆ ತಣಿಸಲೆಂದು
ರೈಲೊಳು ಹಾಡುತ್ತ ಭಿಕ್ಷುಕಿಯಾದಳು
ಮಲಗಲು ನಿಲ್ದಾಣ ತಾಣವಾಯ್ತು
ರೈಲು ಶಬ್ದ ಹಸಿವಿಗೆ ಎಚ್ಚರಿಸುತ್ತಿತ್ತು
ಇವಳಿಗೆ ದೊರಕುವ ಭಿಕ್ಷೆ
ಉಳಿದವರಿಗೆ ಮುಳುವಾಯ್ತು
ಅರಿತಳು ಇದನು ಕೆಲ ದಿನದೊಳಗೆ
ಅವರಿಗೂ ಹಂಚುತ್ತ ಬಂದಳು
ದಿನ ದಿನಗಳು ಬೆಳೆದಂತೆಲ್ಲಾ
ಹಿಂಬಾಲಕರೂ ಬೆಳೆದರು
ಇಲ್ಲೂ ಹೊರ ಹಾಕಿದರು
ಉಳಿಯಲು ಎಲ್ಲೂ ಸ್ಥಳವೇ ಇಲ್ಲಾ
ಇರುವುದೆಲ್ಲಿ ವಯಸಿನ ದೇಹದಿ
ಯೋಚಿಸಿ ಸ್ಥಳವ ಹುಡುಕಿದಳು
ಅದುವೇ ಊರಿನ ಮಸಣವು
ಬಂದವರಾರೂ ಕಾಡರು
ಇದ್ದವರಾರೂ ಬಾರರು
ಅರಿತೇ ಅಲ್ಲೆ ಉಳಿದಳು
ದೊರಕಿದ ದಿನದಿ ಉಂಡರು
ದೊರಕದ ದಿನದಿ
ಮಸಣದಿ ಇಟ್ಟ ಹಿಟ್ಟು ತಂದು
ಚಿತೆಯಲಿ ಬೇಯಿಸಿ ತಿಂದರು
ಕಳೆಯಿತು ಹೀಗೆ ದಿನಗಳು
ಬೆಳೆಯಿತು ಹಾಗೆ ಬಳಗವು
ಚಿಂದಿಯಾದವಳು ಚಂದ್ರವಾದಳು
ಉಳಿದವರ ಪಾಲಿಗೆ
ನಡೆಯಿತು ಇವರಿಗೆ ಆದರ ಸನ್ಮಾನ
ಪರಿಶ್ರಮ ಹಾಗೂ ನಡೆತೆಗೆ
ಹೊದಬ್ಬಿದ ಊರಿನವರಿಂದಲೂ
ಮಾಡಿಸಿಕೊಂಡಳು ಸನ್ಮಾನ
ಸನ್ಮಾನದ ಸಂಭಾವನೆಯಲಿ
ಇವರೆಲ್ಲರ ಉಪಜೀವನ
ಬೆಳೆದಂತೆಲ್ಲಾ ಅನಾಥರ ಆಗಮನ
ಸರಿ ಮಾಡಿದರು ಅವರ ಜೀವನ
ಬೆಳೆಯುತ್ತ ಹೊಯ್ತು ಬಳಗ
ನೂರರಿಂದ ಸಾವಿರ
ಈ ತಾಯಿಯ ಮಮತೆಯಲ್ಲಿ
ಆದರು ಸುಶೀಕ್ಷಿತ ಸುಸಂಸ್ಕೃತ
ತನ್ನ ರಕ್ಷಿಸಿದ ಬರಡಾಕಳಿಗೆ
ಮಾತು ನೀಡಿದ್ದರಂದು
ನೂರಾರು ಬರಡಾಕಳು ಆಶ್ರಯಿಸಿವೆ
ಇವಳ ಆಶ್ರಮದಲಿ ಇಂದು
ಬಳಗದೊಳಗೆ ಬಂದ ಇವರ ಪತಿ
ಪತಿಯಾಗದೆ ಮಗನಾಗಿರೆಂದರು
ಹಿರಿಯನಾದರೂ ಎಲ್ಲರೊಂದಿಗೆ ಇದ್ದ
ಹಿರಿಯಣ್ಣನಾಗಿ ಇವಳಿಗೆ ಮಗನಾಗಿ
ಇಂದು ಪಡೆದಿದ್ದಾಳೆ ಈ ಮಹಾತಾಯಿ
ನೂರಾರು ಸೊಸೆ ಮೊಮ್ಮಕ್ಕಳು ಅಳಿಯಂದಿರು
ಚಿಂದಿ…. ಕಷ್ಟದ ಚಿಂದಿಗಳನ್ನೆ ಕೌದಿಯಾಗಿಸಿ
ಕೌದಿಯಿಂದ ಕಷ್ಟ ಅಟ್ಟಿದರು
ಅಂದಿನ ಚಿಂದಿಯೇ ಸಿಂಧುತಾಯಿ
ಎಲ್ಲರ ಭಾಗದ ಮಾಯಿ
ಆದರ್ಶದ ರೂವಾರಿಯಾಗಿ
ಇದ್ದಾರೆ ಎಲ್ಲರ ಕಣ್ಮಣಿಯಾಗಿ
ಶಿಕ್ಷಣ ಛಲ ಧೈರ್ಯವೊಂದೆ
ನಮ್ಮ ಗೆಲುವಿನ ಅಸ್ತ್ರವು
ಅರಿತು ಬಾಳಿರಿ ಎನುತಲಿಹುದು
ಈ ಮಾತೆಯ ಹೃದಯವು
—————–
ಪ್ರಮೋದ ಜೋಶಿ