ಸತೀಶ್ ಬಿಳಿಯೂರು ಬೆಳಕು ಮೂಡದ ಬದುಕು

ಕಾವ್ಯಸಂಗಾತಿ

ಸತೀಶ್ ಬಿಳಿಯೂರು

ಬೆಳಕು ಮೂಡದ ಬದುಕು

ಮೂಲೆ ಸೇರಿದ ಮನಸು
ಆಲಿಂಗಿಸಲು ಬಾರದ ಕನಸು
ಕಣ್ಣಲ್ಲಿ ಹೊಳಪಿಲ್ಲದೆ ಮೌನ
ಕಗ್ಗತ್ತಲಲ್ಲಿ ಬೆಳಕಿಲ್ಲದೆ ದಿಗ್ಭಂಧನ

ನುಡಿಯುವ ಸತ್ಯಕ್ಕಿಲ್ಲ ನೆಲೆ
ಈ ಜಗದಲಿ ಸುಳ್ಳಿನದೆ ಸರಮಾಲೆ
ಕಣ್ಣೀರ ಕಡಲಲಿ ಉಕ್ಕುತ ಅಲೆ
ಮಮತೆ ಕರುಣೆಗಿಲ್ಲ ಬೆಲೆ

ನೀತಿ ಗೀತಿ ನಿಯತ್ತಿನ ಗಂಟು
ದಾಟಿ ಸಾಗಿದರೆ ಬದುಕಿಗೆ ಗೀಟು
ಬಗ್ಗಿ ನಡೆದರೆ ಧರ್ಮದೇಟು
ಎದ್ದು ನಿಂತರೆ ಕಾಲ ಮೇಲೆ ಬೂಟು

ಸರಿ ದಾರಿಯ ನಡುವೆ
ನ್ಯಾಯವೇ ಅಡ್ಡಲಾಗಿ ನಿಂತಿವೆ
ನಂಬಿಕೆಯ ನಡುವೆ
ಅಪಪ್ರಚಾರವೇ ಬಲವಾಗಿವೆ

ನಗುವನ್ನು ಸಹಿಸದವರು
ಅಳುವನ್ನು ಬಯಸುವರು
ಕಪಟ ತಿಳಿದ ಬಲ್ಲವರು
ಸುಳ್ಳಿನ ಕಂತೆ ಹೆಣೆಯುವರು

ಈ ಮೂಕ ರೋದನೆಯ ನೋವು
ಯಾರಿಗೂ ಅರ್ಥವಾಗದೆ ಹೋದವು
ನಮ್ಮೊಳಗೆ ಇರಲಿ ಎಲ್ಲವೂ
ಅನುಭವಿಸಿ ಬರಲಿ ನೆಮ್ಮದಿಯ ಸಾವು


ಸತೀಶ್ ಬಿಳಿಯೂರು

Leave a Reply

Back To Top