ಜಯದೇವಿ ಆರ್ ಯದಲಾಪೂರೆ ಹೂರಣ

ಕಾವ್ಯ ಸಂಗಾತಿ

ಜಯದೇವಿ ಆರ್ ಯದಲಾಪೂರೆ

ಹೂರಣ

ಹುಟ್ಟು ಸಾವುಗಳ
ಮಧ್ಯೆ
ಬದುಕಿನ ಪಯಣ
ಸತಿ ಸುತರು
ಬಂದು ಬಳಗ
ಒಲವ ಪ್ರೀತಿ
ಭಾವಗಳ ಬಂಧನ
ನೋವು ನಲಿವು
ಸುಖ ದುಃಖಗಳ
ಸಮ್ಮಿಲನ
ಇದು ನಿತ್ಯ ನಿರಂತರ
ಸಂಚಲನ
ಬರುವಾಗ ಏನೂ
ತರಲಿಲ್ಲ
ಹೋಗುವಾಗ ಏನು
ಒಯ್ಯಲಿಲ್ಲ
ಮಾಡಿದ ಕಾರ್ಯಕ್ಕೆ
ಸಾಕ್ಷಿಯೇ
ಹೆಜ್ಜೆ ಗುರುತು
ಮುಂದಿನವರಿಗೆ
ಸಿಂಚನ
ಅದುವೇ ಅವರ
ಯಶಸ್ವಿ ಬದುಕಿಗೆ
ಹೂರಣ


ಜಯದೇವಿ ಆರ್ ಯದಲಾಪೂರೆ

Leave a Reply

Back To Top