ಅಮ್ಮು ರತನ್ ಶೆಟ್ಟಿಕವಿತೆ-ಕಾಲಚಕ್ರ

ಕಾವ್ಯ ಸಂಗಾತಿ

ಅಮ್ಮು ರತನ್ ಶೆಟ್ಟಿ

ಕಾಲಚಕ್ರ

ಋತುಗಳುರುಳಿ ಮಾಸಗಳು
ಬದಲಾಗುವುದು ಕಾಲಚಕ್ರದಲ್ಲಿ
ಅಂತೆಯೇ ಕೆಟ್ಟ ದಿನಗಳು ಕಳೆದು
ಸುದಿನ ಬಾರಲೇ ಬೇಕು ಬದುಕಿನಲ್ಲಿ

ಅವಮಾನಿಸದಿರು ಯಾರನ್ನೂ
ಅವರ ಸ್ಥಿತಿಗತಿಗಳಿಂದ ಅಳತೆ ಮಾಡಿ
ಒಂದೊಮ್ಮೆ ನಾಳೆ ಕೈಚಾಚುವಂತಾಗಬಹುದು
ನೋಯಿಸಿದ ಆ ಜೀವಗಳಿಂದಲೇ

ಇಂದು ಸೋತವರು ನಾಳೆ ಗೆಲುವು
ಕಂಡುಕೊಳ್ಳಬಹುದು ನಿಶ್ಚಿತವಾಗಿ,
ವ್ಯವಸ್ಥಿತವಾಗಿ ನಡೆಯುತ್ತಿರುವ
ಜೀವನ ಬುಡ ಮೇಲಾಗ ಬಹುದು ಕಾಲಚಕ್ರದಲ್ಲಿ

ಹೆತ್ತವರ ನೋಯಿಸಿ ಸುಖವ
ಕಂಡುಕೊಳ್ಳುವ ಯುವ ಸಮಾಜ
ಮರೆತು ಹೋಗಿತ್ತು ಭವಿಷ್ಯದ ಕುರಿತು
ಮರಳಿ ತನಗೂ ಬರಬಹುದು ಅದೇ ದಿನಗಳೆಂದು

ನೋಯಿಸಿದರೂ ನೊಂದರು,ಸೋತವರು ಗೆದ್ದರು
ಎಲ್ಲವೂ ಕೆಲ ಸಮಯವಷ್ಟೇ
ಕಾಲಚಕ್ರದಲ್ಲಿ ಸಮಯದ ಜೊತೆಗೆ
ಬದಲಾಗುವುದು ಬದುಕು


ಅಮ್ಮು ರತನ್ ಶೆಟ್ಟಿ


Leave a Reply

Back To Top