ಕಾವ್ಯ ಸಂಗಾತಿ
ಜಯದೇವಿ ಆರ್ ಯದಲಾಪೂರೆ
ಹೆಣ್ಣಿಗೇಕೆ ಅಪಮಾನ?
ಏಳಿರಿ ನಾರಿಯರೆ ಎಚ್ಚರಾಗಿರಿ
ಸಂಪ್ರದಾಯ ಮುರಿದು ಮುಂದೆನುಗ್ಗಿರಿ
ಗಂಡಿಗೇಕೆ ಸನ್ಮಾನ ಹೆಣ್ಣಿಗೇಕೆ ಅಪಮಾನ
ಏತಕಿಬಗೆಯ ತಾರತಮ್ಯ ಜಗದಲಿ
ಗಂಡು ಹುಟ್ಟಿದರೆ ಹಂಚುವರು ಪೇಡಾ
ಹೆಣ್ಣು ಹುಟ್ಟಿದರೆ ತಗಲಿತ್ತೆನ್ನವರು ಪೀಡಾ
ಹೆಣ್ಣು ಸಾಧನೆಯ ಪಥದಲ್ಲಿದರು
ತಪ್ಪಲಿಲ್ಲ ಆಕೆಯಮೇಲಾಗುವ ಶೋಷಣೆ
ಗಂಡ ಸತ್ತ ಹೆಣ್ಣಿಗೆ ತಾಳಿ ಕುಂಕಮಳಿಸಿ
ವಿಧವೆ ಮಾಡಿ ಬಿಡುವರು
ಹೆಂಡತಿ ಸತ್ತ ಗಂಡಿಗೆ ವರೋಪಚಾರ ಪಡೆದು
ಮರು ಮದುವೆ ಮಾಡುವರು
ಹೆಣ್ಣು ಪರಪುರುಷನ ಜೊತೆ ಮಾತನಾಡಿದರೆ
ಅನ್ನುತ್ತಾರೆ ಆಕೆ ಸರಿಯಿಲ್ಲ
ಅದೇ ಗಂಡಸು ಪರಸ್ತ್ರೀಯರಿಗೆ ಮಾತನಾಡಿದರೆ
ಹೊಗಳುತ್ತಾರೆ ಗೋಪಿಯರ ಕೃಷ್ಣನೆಂದು
ಹೆಣ್ಣಿಗಿಲ್ಲದ ಸೌಕರ್ಯ ಗಂಡಿಗೇಕಿದೆ
ಮೌಡ್ಯನೀತಿ ಮುರಿದು ಮುನ್ನುಗ್ಗಬೇಕಿದೆ
ಝಾನ್ಸಿರಾಣಿ ಕಿತ್ತೂರು ಚೆನ್ನಮ್ಮ ನಾಗಬೇಕಿದೆ
ಶೋಷಣೆ ಮಾಡುವ ಸಮಾಜಕ್ಕೆ
ಲೇಖನಿ ಎಂಬ ಖಡ್ಗ ಹಿಡಿದು ಪಾಠ ಕಲಿಸಬೇಕಿದೆ
ಹೆಣ್ಣು ಗಂಡು ಒಂದೇ ಎಂಬ ಅರಿವು ಮೂಡಿಸಬೇಕಿದೆ
ಜಯದೇವಿ ಆರ್ ಯದಲಾಪೂರೆ