ಸುಧಾ ಪಾಟೀಲರವರ ಕವಿತೆ ಸ್ನೇಹ ಸರದಾರ

ಕಾವ್ಯ ಸಂಗಾತಿ

ಸುಧಾ ಪಾಟೀಲರವರ

ಸ್ನೇಹ ಸರದಾರ

ಒಪ್ಪಿಗೆಯ ಒಡನಾಟದಿ
ಚಂಚಲತೆಯ ಹಿಂದಿಕ್ಕಿ
ಸಹನೆಯ ಮೈಗೂಡಿಸಿ
ನನ್ನೀ ಅಸ್ಮಿತೆಯ ಹುಡುಕಿ
ಕೊಟ್ಟ ಸ್ನೇಹ ಸರದಾರ

ಬಾಳೆ0ಬ ಪುಟದಿ
ಹೊನ್ನ ಅಕ್ಷರ ಬರೆದು
ಪುಟಕ್ಕಿಟ್ಟ ಚಿನ್ನದ ಹಾಗೆ
ಹೊಳೆಯುವ0ತೆ ಮಾಡಿದ
ಒಲವಿನ ಹಮ್ಮೀರ

ಭೇದ ಭಾವವ ಮರೆತು
ಬೆರೆಯಲು ಕಲಿಸಿದ
ಎಲ್ಲರೊಳು ಒಂದಾಗಿ
ಪ್ರೀತಿಸಲು ಹೇಳಿಕೊಟ್ಟ
ಭಾವನೆಗಳ ಕನಸುಗಾರ

ಬೇಗೆಯ ನೀಗಿದ
ಕಣ್ಮನ ತಣಿಸಿದ
ಮುತ್ತಿನಂತಹ ಮಾಲೆ
ಪೋಣಿಸಿದ
ವಾಕ್ಯಗಳ ಸಿಂಗರಿಸಿದ
ಮಾಯೆಯ ಮೋಡಿಗಾರ

ಆತ್ಮ ಅನುಸ0ಧಾನದ
ಸೊಗಡಿನ ಹಾದಿಯಲಿ
ಸಮರ್ಪಣೆಯ ಭಾವ
ಹೊರಹೊಮ್ಮಿ
ಒಂದಾದ ಸ್ನೇಹ ಸರದಾರ

ಯಾವುದರ ಪರಿವೆಯಿಲ್ಲದ
ಯಾರಿಗೂ ವಿವರಿಸದ
ಸ್ನೇಹದ ಪರಿಮಿತಿಯ
ತಿಳಿಸಿಕೊಟ್ಟ ನಿಜವಾದ
ಸ್ನೇಹ ಸರದಾರ


ಸುಧಾ ಪಾಟೀಲ್

Leave a Reply

Back To Top