ಬಾಗೇಪಲ್ಲಿಯವರ ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿಯವರ ಗಜಲ್

ಪ್ರೇಮಿಯ ನೆನಪಲಿ ಮರುಗುವುದೇ ಪ್ರಾರ್ಥನೆಯಂತಿದೆ
ಅದೊಂದು ವಿಧವಾದ ಮಧುರವಾದ ಯಾತನೆಯಂತಿದೆ

ಸಂತೃಪ್ತಿ ನೆಮ್ಮದಿ ಬಾಳಿನಲಿ ಇರಬೇಕಾದ ಸಮಯವಿದು
ನೆನಪುಗಳು ತಂದ ಫಲ ಹೇಳಲಾಗದ ರೋಧನೆಯಂತಿದೆ

ಸಾಹಿತ್ಯ ದಾಖಲಿಸಿತು ಅದನು ನಿಷ್ಕಳಂಕ ಪ್ರೇಮವೆನುತಲಿ
ವಿಚಾರ ಮಾಡಿ ನೋಡಲು ಅದು ತೀರದ ಕಾಮನೆಯಂತಿದೆ

ಹೇಳುವರು ಹಲವರು ಪ್ರೇಮದ ಕೊನೆ ಹಂತ ಕಾಮವೆನುತ
ಪ್ರೇಮವ ದಕ್ಕಿಸಿಕೊಳ್ಳಲು ಮಾಡಿದ್ದೆಲ್ಲಾ ಯಾಚನೆಯಂತಿದೆ

ಮಂದ ಗಮನೆಯಲ್ಲದೆ ಕಮಲ ಲೋಚನೆ ಹೊಂದಿದ್ದಳಾಕಿ
ಕೃಷ್ಣಾ! ಹೇಗೆ ಮರೆಯಲಿ ಮೊಗವ ಚಂದದ ಖಜಾನೆಯಂತಿದೆ


ಬಾಗೇಪಲ್ಲಿ

Leave a Reply

Back To Top