ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿಯವರ
ಗಜಲ್
ಸೆರಗಿಗಂಟಿದ ಕಂಪು ತೇಲುತ ಮನವ ಸೆಳೆಯುತಿದೆ
ಬಯಲ ಸಂತೆಯ ಗುಂಪಲಿ ನಯನ ಅವಳ ಹುಡುಕುತಿದೆ
ಮುಂಗಾರು ಮಳೆಗೆ ನೆಂದ ಕೋಗಿಲೆ ಮೌನವಾಗಿದೆ
ಹೃದಯವು ಮಧುರ ಕಂಠದ ಗಾನ ಕೇಳ ಬಯಸುತಿದೆ
ನೋಟ ಬಾಗಿಲಿಗೆ ನೆಟ್ಟಿದೆ ಅವಳ ಬರುವ ನೆನೆಯುತ
ಮುಸ್ಸಂಜೆ ಸರಿಯುತ ಮಧು ಬಟ್ಟಲು ಬರಿದಾಗುತಿದೆ
ಬೆತ್ತಲೆಯಾದ ಮರ ಕಾಯುತಿದೆ ವಸಂತನಿಗಾಗಿ
ಮಾಗಿದಿನ ಚಳಿಗೆ ತನುವು ಸಾಂಗತ್ಯವ ಬೇಡುತಿದೆ
ಅವಳ ಪಡೆಯುವೆನೆಂಬ ಭ್ರಮೆಯು ತಂದಿದೆ ಸಂತಸ
ಒಲವ ತೈಲವಿಲ್ಲದ ಹಣತೆಯ “ಪ್ರಭೆ” ಆರುತಿದೆ
ಪ್ರಭಾವತಿ ಎಸ್ ದೇಸಾಯಿ