ಡಾ.ಸುಮತಿ ಪಿ.ರವರ ಕವಿತೆ-ಸ್ನೇಹ ಸೇತು*

ಕಾವ್ಯ ಸಂಗಾತಿ

ಡಾ.ಸುಮತಿ ಪಿ.ರವರ ಕವಿತೆ-

ಸ್ನೇಹ ಸೇತು

ಎರಡು ಮನಸುಗಳ ಬೆಸೆದು
ಒಂದಾಗಿಸುವ ಸ್ನೇಹ ಸೇತು
ಸಮಾನ ಅಭಿರುಚಿ ಹೊಸೆದು
ಜೊತೆಯಾಗಿಸುವ ಪ್ರೀತಿಮಾತು

ಕಷ್ಟಕಾಲಕ್ಕೆ ಪರ‍ಸ್ಪರ ನೆರವಿನಲಿ
ಉದ್ಧರಿಸುವ ಮನಸಿನ ಸೇತು
ದುಃಖದಲ್ಲಿ ಸಾಂತ್ವನವ ನೀಡಲು
ಸಮಾಧಾನಿಸಿ ಬೆಂಬಲವಿತ್ತು

ಸಂಗಾತಿ ಹಿತವನು ಬಯಸುತ
ಖುಶಿಗೆ ಮೈಮರೆಯುವ ಹೊತ್ತು
ಒಬ್ಬರಿಗೊಬ್ಬರು ಸಹಜೀವನದ
ಬದುಕನು ಆಶಿಸುವ ಸ್ನೇಹ ಮುತ್ತು

ನಕ್ಕು ನಗುವಲಿ ಹಗುರವಾಗುತ
ಸಂತಸದಲಿ ನಲಿಯುವ ಗತ್ತು
ಬಯಕೆಯಲೂ ಭಾಂದವ್ಯವನು
ಬೆಸೆದು ಮೆರೆಯುವ ಗಮ್ಮತ್ತು

ನಿಷ್ಕಲ್ಮಶ ಮನದಲಿ ಹುಟ್ಟುವ
ಪ್ರೀತಿಯಲಿ ಸಿಗುವ ಆಹ್ಲಾದ
ದ್ವೇಷ ಸುಳಿಯದಂತೆ ನೋಡುವ
ಅರಳುವ ಪ್ರೇಮ ಬಲು ಮೋದ

ಬದುಕನು ಕಟ್ಟುವ ಬಂಧವದು
ಚಿರಸ್ಥಾಯಿಯಾಗಿ ನಿಂತಿರಲು
ನಂಬಿಕೆ,ಪ್ರೀತಿ, ವಿಶ್ವಾಸವೆಂಬುದು
ಗಳಿಸಿದ ಸ್ನೇಹ ಗಟ್ಟಿಯಾಗಿರಲು.


ಡಾ.ಸುಮತಿ ಪಿ

One thought on “ಡಾ.ಸುಮತಿ ಪಿ.ರವರ ಕವಿತೆ-ಸ್ನೇಹ ಸೇತು*

Leave a Reply

Back To Top