ಮಂಜುಳಾ ಪ್ರಸಾದ್-ಸ್ನೇಹವೆಂದರೆ…

ಕಾವ್ಯ ಸಂಗಾತಿ

ಮಂಜುಳಾ ಪ್ರಸಾದ್

ಸ್ನೇಹವೆಂದರೆ…

ಸ್ನೇಹವೆಂದರೆ ಅರಳೋ ಮಲ್ಲಿಗೆ
ಸ್ನೇಹವೆಂದರೆ ಆಸರೆ ಬಳ್ಳಿಗೆ
ಸ್ನೇಹವೆಂದರೆ ಮೊಗದ ಮುಗುಳ್ನಗು
ಸ್ನೇಹವೆಂದರೆ ಪ್ರಕೃತಿಯ ಸೊಬಗು
ಸ್ನೇಹವೆಂದರೆ ರವಿಕಿರಣದ ಹೊಳಪು
ಸ್ನೇಹವೆಂದರೆ ಚಂದಿರನ ತಂಪು
ಸ್ನೇಹವೆಂದರೆ ಒಂದೇ ಎನ್ನುವ ಭಾವ
ಸ್ನೇಹವೆಂದರೆ ಮರೆಸುವುದು ನೋವ
ಸ್ನೇಹದಿಂದ ಸಲುಗೆ
ಸ್ನೇಹದಿಂದ ಬೆಸುಗೆ
ಸ್ನೇಹವೆಂದೂ ಬಾಡದ ಹೂವು
ಸ್ನೇಹದಿಂದಲೇ ಒತ್ತಡದ ಬಿಡುವು
ಸ್ನೇಹಕ್ಕೆ ಸ್ನೇಹ,ಪ್ರೀತಿಗೆ ಪ್ರೀತಿ
ನಗುವಲ್ಲಿ ಅಳುವಲ್ಲಿ ಒಂದಾಗಿ
ಸಾಗೋ ಈ ಪರಿಯ ರೀತಿ..
ಇಹುದೇ ಸ್ನೇಹಕ್ಕೆ ಮಿಗಿಲಾದ ಹರವು
ಉಸಿರಿಗೆ ಉಸಿರಾದ ವರವು..
ಸ್ನೇಹಕ್ಕೊಂದು ದಿನ ಏಕಂತೆ?
ಜಗವೆಲ್ಲಾ ಸ್ನೇಹದೊಳು ಕೂಡಿರಲು
ಪ್ರತಿದಿನವೂ ನಗುತಿರಲಿ ಅರಳಿ
ಘಮಘಮಿಸುವ ಹೂವಂತೆ!


ಮಂಜುಳಾ ಪ್ರಸಾದ್

8 thoughts on “ಮಂಜುಳಾ ಪ್ರಸಾದ್-ಸ್ನೇಹವೆಂದರೆ…

  1. ಎಲ್ಲಾ ಸಂಬಂಧಗಳಿಗೂ ಮಿಗಿಲಾದದ್ದು ಈ ಸ್ನೇಹ… ಎಂದು ಹೇಳುವ ನಿಮ್ಮ ಕವನ ಅದ್ಭುತವಾಗಿದೆ ಮಂಜು

    1. ಎಲ್ಲಾ ಬಾಂದವ್ಯಗಳಿಗಿಂತ ಮೀರಿ ನಿಲ್ಲಬಲ್ಲ ಬಾಂದವ್ಯ ಸ್ನೇಹ ಬಾಂಧವ್ಯ. ಎಂಬುದರ ಪ್ರತೀಕ ಈ ಕವನ.

  2. ಸ್ನೇಹ ಎಂಬ ಮಧುರ ಬಾಂಧವ್ಯ ವನ್ನು ಜೇನಿಗಿಂತಲೂ ಸಿಹಿಯಾಗಿ ಉಣಬಡಿಸಿದ ಸ್ನೇಹಜೀವಿ ಯಾದ ನಿಮಗೆ ಅನಂತಾವಂದನೆಗಳು

Leave a Reply

Back To Top