ರುಕ್ಮಿಣಿ ನಾಯರ್ ಕವಿತೆ-ಸ್ನೇಹದ ಕಡಲು

ಕಾವ್ಯ ಸಂಗಾತಿ

ರುಕ್ಮಿಣಿ ನಾಯರ್

ಸ್ನೇಹದ ಕಡಲು

ನಿನ್ನ ಸ್ನೇಹದ ಕಡಲು ಆಳದ ಮಡಿಲು
ಅದರಲ್ಲಿ ಎಷ್ಟು ಮುಳುಗಿದರು
ಸಾಲದು ಎನಿಸುವ ಆಸೆಯ ಕಡಲು
ಮುಳುಗಿ ಏಳುವ ವೇಳೆ ಕೈಯ ತುಂಬಾ ಹವಳಗಳು

ಸುಂದರ ನೆನಪಿನ ಬುತ್ತಿಯಲ್ಲಿ ಇಡಲು
ಕಳೆದ ಸುಂದರ ಸಮಯಗಳ ಉಡುಗೊರೆ
ಎಂದೆಂದಿಗೂ ಜೊತೆ ಇರುವೆ ಎಂಬ
ಭರವಸೆಯ ಭಾವ ನನ್ನೆದೆಯ ತುಂಬಿರುವ ಹೂಗಳು

ಆಸ್ತಿ ಅಂತಸ್ತುಗಳ ಬದಿಗಿಟ್ಟು ಇರಲು
ಈ ಸ್ನೇಹ ಹಸ್ತವ ನೀಡಿ ಬಾಳೆಲ್ಲ ಜೊತೆಗಿರಲು
ಅಮೃತ ಕಲಶದಿಂದ ಧಾರೆಯೆರೆದ ಮಮತೆ
ನನ್ನ ನೋವೆಲ್ಲಾ ಸಂಜೀವಿನಿಯಂತೆ ಮರೆಸಿರಲು

ಈ ಸ್ನೇಹಕೆ ನನ್ನ ಮನ ಎಂದೋ ಸೋತಿರಲು
ಇನ್ನಾವ ಸಂಪತ್ತು ಬೇಕು ನನಗಿನ್ನು ಕೂಡಿಡಲು
ಇಷ್ಟಿದ್ದರೆ ಸಾಕು ನಾ ಬದುಕೆಂಬ ಸಾಗರ ದಾಟಲು
ಮನ ತುಂಬಿ ಹರಸುವೆ ನಿನ್ನ ಬಾಳು ಎಂದಿಗೂ ಹಸನು


ರುಕ್ಮಿಣಿ ನಾಯರ್

14 thoughts on “ರುಕ್ಮಿಣಿ ನಾಯರ್ ಕವಿತೆ-ಸ್ನೇಹದ ಕಡಲು

      1. ಪ್ರೀತಿಯ ರುಕ್ಮಿಣಿ❤️
        ನಿಮ್ಮ ಬರಹ ನಿಮ್ಮ ಮನಸಿನಂತೆ ಹಾಗೂ ನಿಮ್ಮ ಸ್ನೇಹದಂತೆ ತುಂಬಾ ಸುಂದರವಾಗಿದೆ.ಓದಿ ತುಂಬಾನೇ ಖುಷಿ ಪಟ್ಟೆ.ಹಾಗೆ ನಿಮ್ಮ ಬರವಣಿಗೆ ನನ್ನನ್ನು ನಿಮ್ಮ ಅಭಿಮಾನಿಯನ್ನಾಗಿಸಿದೆ.

        1. ನಿಮ್ಮ ಅಭಿಮಾನ ಹಾಗೂ ಈ ಸುಂದರ ಸ್ನೇಹಕ್ಕೆ ನಾನೆಂದೂ ಚಿರಋಣಿ ಜ್ಯೋತಿ
          ಮನ ತುಂಬಿ ಧನ್ಯವಾದಗಳು

        2. ನಿಮ್ಮ ಈ ಸ್ನೇಹ ಹಾಗೂ ಅಭಿಮಾನಕ್ಕೆ
          ಮನತುಂಬಿ ಧನ್ಯವಾದಗಳು ಜ್ಯೋತಿ❤️

Leave a Reply

Back To Top