ಕಾವ್ಯ ಸಂಗಾತಿ
ರಜಿನಿ ಗೌಡ ಮಂಡ್ಯ
ನೆಚ್ಚಿನ ಸ್ನೇಹ
ಪರಿಚಯವಿಲ್ಲದ ಪರಿಚಿತರಾಗುವ
ರಕ್ತ ಸಂಬಂಧವ ಮೀರಿದ ಬಂಧವಿದು
ಸ್ವಾರ್ಥವಿಲ್ಲದೆ, ದ್ವೇಷವಿಲ್ಲದೆ
ಜೊತೆ ಬೆರೆತು ಬದುಕುವ ಸ್ನೇಹವಿದು
ನಗುವಿಗೆ ಚೆಲುವಾಗುತಾ ನೋವಿಗೆ ಸಂಜೀವಿನಿಯಾಗುತಾ
ಗುರುವಿನಂತೆ ಸ್ಪೂರ್ತಿಯಾಗುವ
ಮನ ಮೆಚ್ಚಿದ ಸ್ನೇಹವಿದು
ಕಲಿಕೆಯಿಂದ ಜೊತೆ ಸೇರಿ
ಪ್ರೀತಿಯಿಂದ ಜೊತೆ ನಿಂತು
ಜಗವನ್ನೇ ಮರೆಸುವ ಶಕ್ತಿಯಾಗಿ
ಮತ್ತೊಮ್ಮೆ ಮಗುವಾಗಿಸುವ ಸ್ನೇಹವಿದು
ಅಪ್ಪನಂತೆ ಅಕ್ಕರೆ ತೋರುವುದು
ಅಮ್ಮನಂತೆ ಪ್ರೀತಿ ನೀಡುವುದು
ಬಂಧುಗಳಿಗೂ ಮೀರಿದ ಬಾಂಧವ್ಯವೇ
ಕೊರತೆ ನೀಗಿಸುವ ಒಡನಾಟದ ಸ್ನೇಹವಿದು
ಬಡತನವಿರಲಿ ಸಿರಿತನವಿರಲಿ
ನಮ್ಮ ಸ್ನೇಹವೆಂದೆಂದು ಚಿರವಾಗಿರುವುದು
ಸುಖವಿರಲಿ ದುಃಖವಿರಲಿ
ಕೊನೆವರೆಗೂ ಕದಲದ ಸ್ನೇಹವಿದು
ನನ್ನ ನಿಮ್ಮ ಭೇಟಿ ಆಕಸ್ಮಿಕ
ಆದರೂ ವಂದಿಸುವೆನು ಮನದ ತುಂಬ
ಬಾಳಲ್ಲಿ ಬಂದು ತುಂಬಿದಿರಿ ಬೆಳಕ
ಮರೆಯದಿರಿ, ಇತಿ, ನಾ ನಿಮ್ಮ ಸ್ನೇಹಿತ