“ಗೆಳೆಯರೆಲ್ಲಿ ಕಣ್ಮರೆಯಾದರು !!!!!!!!”

ಕಾವ್ಯ ಸಂಗಾತಿ

ಮಾಸ್ತಿಬಾಬು.ಎಂ

“ಗೆಳೆಯರೆಲ್ಲಿ ಕಣ್ಮರೆಯಾದರು !!!!!!!!”

ಕಣ್ಣಿನಲ್ಲಿವೆ ನೂರಾರು ಕನಸುಗಳು
ಮನದಲ್ಲಿವೆ ಸಾವಿರಾರು ಭಾವನೆಗಳು
ಹಂಚಿಕೊಳ್ಳಲು ಇಲ್ಲ ಗೆಳೆಯರು!!!!!!

ಕಂಡಿದ್ದು, ಕೇಳಿದ್ದು, ನೋಡಿದ್ದು, ಹೇಳಿದ್ದು
ಎಲ್ಲವ ಹಂಚಿಕೊಳ್ಳಲಾಸೆ
ಹಂಚಿಕೊಳ್ಳಲು ಇಲ್ಲ ಗೆಳೆಯರು!!!!!!!

ಎಳೆಯರಲಿದ್ದ ಗೆಳೆಯರು ಇಂದಿಲ್ಲ‌
ಎಲ್ಲಿ ಮರೆಯಾಗಿಹರೋ‌ ಸುಖ ದುಃಖವ
ಹಂಚಿಕೊಳ್ಳಲು ಇಲ್ಲ ಗೆಳೆಯರು!!!!!!!

ಆಡಿದ ಆಟವ, ಮಾಡಿದ ಸಾಧನೆಯ
ತೋರಿ ಸಂತಸಪಟ್ಟ ಕ್ಷಣಗಳ
ಹಂಚಿಕೊಳ್ಳಲು ಇಲ್ಲ ಗೆಳೆಯರು!!!!!!!

ಮುಂದಿನ ದಿನದ ರಸದೌತಣವ
ಒಟ್ಟಿಗೆ ಕೂಡಿ
ಹಂಚಿಕೊಳ್ಳಲು ಇಲ್ಲ ಗೆಳೆಯರು!!!!!!!

ಏನೇ ಬರಲಿ ಏನೇ ಆಗಲಿ
ಎಂದೆಂದಿಗೂ ನಾ ಜೊತೆಯಲಿರುವೆ ಎಂದವರು ಇಂದಿಲ್ಲ ನನ್ನ ಗೆಳೆಯರು!!!!!!


ಮಾಸ್ತಿಬಾಬು.ಎಂ

4 thoughts on ““ಗೆಳೆಯರೆಲ್ಲಿ ಕಣ್ಮರೆಯಾದರು !!!!!!!!”

Leave a Reply

Back To Top