ಇಮಾಮ್ ಮದ್ಗಾರ ಕವಿತೆ- ಕನಸು

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಕನಸು

ಮೇಣ ಮೈ
ಕರಗಿಸಿ ಕೊಂಡೇ
ಸತ್ತು ಹೋಯಿತು
ನಿನ್ನ ಕತ್ತಲ ಪ್ರೀತಿಗೆ
ಬೆಳಕಾಗಿ !!!

ನನ್ನ ಹೃದಯದ ಮೇಲೆ
ನಿನ್ನಾಡಳಿತ ವಿದೆ !!
ನಂಗೊತ್ತು !!
ನಿನ್ನ ಹೃದಯದ ಮೇಲೆ
ನನ್ನ ಅಧಿಕಾರ ವಿಲ್ಲ !!!

ಸಾಯಂಕಾಲದ
ತತ್ತರಗಳು ಬೆಳಗಿನ
ಜಾವದ ಭಯದ
ಮುನ್ಸೂಚನೆಯಾ ?

ಯಾಕೋ ಗೊತ್ತಿಲ್ಲ
ಇತ್ತೀಚೆಗೆ ಪ್ರತಿ
ಮುಂಜಾವಿಗೂ ನನ್ನ
ಮೇಲೆ ಮುಂಗೋಪ !!

ಭಾವನೆಗಳು ಬಸವಳಿಯುತ್ತಿವೆ
ಕನಸುಗಳು ಬೆದರುತ್ತಿವೆ
ಗೊತ್ತಿದೆ ನಂಗೆ…
ನಶಿಸು ವಂತಹುದಲ್ಲ
ನಿನ್ನ ನೆನಪು


ಇಮಾಮ್ ಮದ್ಗಾರ

Leave a Reply

Back To Top