ವಚನಶ್ರೀ ಶಿವಕುಮಾರ ಕವಿತೆ-ಪುಟ್ಟ ಹೃದಯ

ಕಾವ್ಯ ಸಂಗಾತಿ

ವಚನಶ್ರೀ ಶಿವಕುಮಾರ

ಪುಟ್ಟ ಹೃದಯ

ನಶ್ರೀ ಶಿವಕುಮಾರ ಪಾಟೀಲ: ಈ ಪುಟ್ಟ ಹೃದಯದಲೀಗ
ಗಾಯದ ಬರೆಗಳಿವೆ.
ಈಗೀಗ ಹೃದಯದ ಹೊಲದಲ್ಲಿ
ನಿನ್ನ ಕರುಣೆ ಪ್ರೀತಿಯ ಬೀಜಗಳು ಬಿದ್ದು ಭೂಮಿ
ಹಸಿರಾದಂತೆ ಗಾಯಗಳು
ಮಾಯವಾಗಿವೆ.
ಮತ್ತೆ
ಈ ಭೂಮಿತುಂಬ ಮೊಳಕೆಯೊಡೆದ ಸಸಿಗಳು
ಫಲಕೊಡುವ ಮುನ್ನ
ಓ ಫಲದ ಮಳೆಯೇ ನೀ
ಎಲ್ಲಿ ಹೋದೆ.
ಮತ್ತೆ ಬಾ ಒಲವು ಸುರಿಸು
ಕಾಯುತಿರುವೆ ನೀನೆ
ಬಯಸುತ್ತಿದ್ದ ಸೂಜು ಮಲ್ಲಿಗೆಯ ಮುಡಿದು
ಮೂಸು ಬಾ ಇನಿಯ
ಕಾಯುತಿರುವೆ ಕಣ್ಣದೀಪವನು
ಬೆಳಕುಮಾಡಿ ಬೆಳಕಿಗೆ ಬೆಳಕು ಸೇರಿಸಿ ಬೆರಗುಗೊಳಿಸು
ನಿನಗೆ ಜೀವತುಂಬಿದ ನನ್ನ ಹೃದಯ ಚಕ್ರ ನಿಲ್ಲುವ ಮೊದಲು ಬಾ ಇನಿಯ
ಚಲನೆನೀಡು ಹಾಡೋಣ ಇಬ್ಬರೂ ಜಗವ ನಾಚುವಂತೆ
ಒಲವಗೀತೆ.


ವಚನಶ್ರೀ ಶಿವಕುಮಾರ

Leave a Reply

Back To Top