ಜೀವ ಧಾಮಿನಿ ಕವಿತೆ-ಡಾ ಶಶಿಕಾಂತ ಪಟ್ಟಣ

ಕಾವ್ಯ ಸಂಗಾತಿ

ಜೀವ ಧಾಮಿನಿ

ಡಾ ಶಶಿಕಾಂತ ಪಟ್ಟಣ

ನಿನ್ನ ನೋಡಲು ಆತುರ
ರಾತ್ರಿ ಕಳೆಯದ ಬೇಸರ
ನಿತ್ಯ ನನ್ನ ನೂರು ಕನಸು
ಕವನವಾಗುವ ಆಸರ

ದೂರ ದೇಶದ ಚೆಲುವು ನೀನು
ಸ್ನೇಹ ಪ್ರೀತಿ ನಗೆಯ ಬಾನು
ಮನಕೆ ಮನವು ಕೂಡಿ ಕೊಂಡಿತು
ನಾನು ನೀನು ಆನು ತಾನು

ಬೆಳೆವ ಭೂಮಿ ಪೊಡವಿ ಐಸಿರಿ
ಮನದ ಮೂಲೆಯ ಪ್ರೇಮ ಝರಿ
ಮೋಹ ಮಾಯಾ ತೊರೆವ ಪರಿ
ಸತ್ಯ ಸಮತೆ ಶಾಂತಿ ಗರಿ

ಎಲ್ಲಾ ಕಡೆಗೆ ಹುಡುಕುತ್ತಿರುವೆ
ಇದ್ದೂ ಇಲ್ಲದ ಬಯಲ ಭಾಮಿನಿ
ಮನವ ಸೆಳೆವ ಕಾಮಿನಿ

ಮುಕ್ತ ಮೋಕ್ಷ ಜೀವ ಧಾಮಿನಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

14 thoughts on “ಜೀವ ಧಾಮಿನಿ ಕವಿತೆ-ಡಾ ಶಶಿಕಾಂತ ಪಟ್ಟಣ

  1. ದೂರ ದೇಶದ ಚೆಲುವಿನ …. ಜೀವ ಧಾಮಿನಿ ಸುಂದರವಾಗಿ
    ಮೂಡಿ ಬಂದಿದೆ

  2. ಜೀವಸೆಲೆ ಸ್ಫುರಿಸುವ ಭಾವಗಳು

  3. ಕವನ ನಿಜಕ್ಕೂ ಅರ್ಥಪೂರ್ಣ ಸುಂದರ ಭಾವ ಪ್ರಜ್ಞೆ ತುಂಬಿದ ಅಭಿವ್ಯಕ್ತಿ

  4. ಕವನ ಸುಂದರ ಭಾವ ತುಂಬಿದ ಅಭಿವ್ಯಕ್ತಿ

  5. *ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ*…
    ಎಂಬ ಕವಿ ವಾಣಿಯಂತೆ…
    *ದೂರ ದೇಶದ ಚೆಲುವ ಕಾಮಿನಿ* *ಬಯಲ ಭಾಮಿನಿ ಜೀವ ಧಾಮಿನಿ* ಚಂದ….
    ಹತ್ತಿರವಿರುವ ಎಲ್ಲಕ್ಕಿಂತ ದೂರವಿರುವ ಎಲ್ಲದರ ಬಗ್ಗೆ ಸೆಳೆತ ಬಹಳ….
    ನಿತ್ಯ ಕಂಡ ನೂರು ಕನಸುಗಳೆಲ್ಲ ಕವನವಾಗಲು ಇರುವ ಆಸರ…. *ಈ ದೂರ ದೇಶದ ಭಾಮಿನಿ*……
    ಸುಂದರ ಭಾವಾಭಿವ್ಯಕ್ತಿ….
    — ಇಂದಿರಾ..

Leave a Reply

Back To Top