ಸುಧಾ ಪಾಟೀಲ ಕವಿತೆ-ಮತ್ತೆ ಮೂಡಿದ

ಕಾವ್ಯ ಸಂಗಾತಿ

ಸುಧಾ ಪಾಟೀಲ

ಮತ್ತೆ ಮೂಡಿದ

ಮತ್ತೆ ಮೂಡಿದ ಹೊಂಗಿರಣವಿದು
ಕಾಮನಬಿಲ್ಲಿನ ಏಳು
ಬಣ್ಣದ ರಂಗಿದು
ಪ್ರೀತಿಯ ಸರಮಾಲೆಯಿದು

ಮತ್ತೆ ಮೂಡಿದ
ಅಭಿಲಾಷೆಗಳ ಹೊನಲಿದು
ಪ್ರಕೃತಿಯಲಿ ಹಾಡುವ
ಇಂಚರವಿದು
ಗರಿಗೆದರಿ ಕುಣಿಯುವ
ನೋಟವಿದು

ಮತ್ತೆ ಮೂಡಿದ
ನೆನಪುಗಳ ಮೆರವಣಿಗೆಯಿದು
ಬಂಧನಗಳ ಸಡಗರವಿದು
ಎಲ್ಲವನೂ ಒಪ್ಪುವ
ಹುರುಪಿನ ಮನಸಿದು

ಮತ್ತೆ ಮೂಡಿದ
ಹೃದಯದ ಹಂದರವಿದು
ರಂಗೋಲಿಯ ಚಿತ್ತಾರವಿದು
ಅರಳುವ ಪುಷ್ಪಮಾಲೆಯಿದು
ಯಾರಿಗೂ ಸಿಗದ ಅಮೂಲ್ಯ
ರತ್ನವಿದು

ಮತ್ತೆ ಮೂಡಿದ
ಒಲವಿನ ಮಂದಾರವಿದು
ಕನಸುಗಳ ತಾಣವಿದು
ಚಿಗುರುವ ಗೆಳೆತನವಿದು
ಜನುಮ ಜನುಮದ
ಆರಾಧನೆಯಿದು


ಸುಧಾ ಪಾಟೀಲ

3 thoughts on “ಸುಧಾ ಪಾಟೀಲ ಕವಿತೆ-ಮತ್ತೆ ಮೂಡಿದ

  1. ಸುಂದರವಾದ ಭಾವ
    ಕವಿತೆ ಚೆನ್ನಾಗಿದೆ ಮೇಡಂ ಧನ್ಯವಾದಗಳು

  2. ನಿಮ್ಮ ಪ್ರೀತಿಯ ಅಭಿವ್ಯಕ್ತಿಗೆ ಧನ್ಯವಾದಗಳು ಮೇಡಂ

Leave a Reply

Back To Top