ಗೊರೂರು ಜಮುನ ಕವಿತೆ-ಅರಳುವ ಮುನ್ನವೆ

ಕಾವ್ಯ ಸಂಗಾತಿ

ಗೊರೂರು ಜಮುನ

ಅರಳುವ ಮುನ್ನವೆ

ತರುವಪ್ಪಿ ಲತೆಯೊಂದು ಪಸಿರಿನಲಿ ನಳಿಸುತಲಿ
ಪರಿಸರದಿ ರಾಣಿ ತಾನೆಂಬಂತೆ ನಲಿಯುತಲಿ
ಸೆರೆಹಿಡಿದು ರಸಿಕರ ಮನಸುಗಳ ಸೆಳೆಯುತಲಿ
ಹರುಷದಲಿ ಜೀಕುತ್ತಿತ್ತು..ಸುಮಧುರ ಗಾಳಿಯಲಿ/

ಮುದ್ದಾದ ಮೊಗ್ಗೊಂದು ಮೂಡುವ ಹೊತ್ತು
ಭಾವಗಳು ಬಯಕೆಗಳು ತುಂಬಿ ತುಳುಕಿತ್ತು
ಕಾಮನಬಿಲ್ಲದು ಅಕ್ಷಿಪಟಲಕೆ ಅಂಟಿತ್ತು
ಲೋಕವೇ ವರ್ಣಮಯವಾಗಿ ಕಂಗೊಳಿಸುತ್ತಿತ್ತು/

ನಂಬುಗೆಯ ಹಂಬಿಡಿದು ದೋಣಿ ಸಾಗಿತ್ತು
ಕಡಲಿನ ಆಳದ ಅರಿವು ಮರೆತೋಯ್ತು,
ಸಾಗರದ ಅಲೆಯಲ್ಲಿ ಕನಸುಗಳ ಅಮಲಿತ್ತು
ದಡವ ಸೇರುವೆನೆಂಬ ಹುಂಬತನ ಅಲ್ಲಿತ್ತು/

ದುಂಬಿಯ ಝೇಂಕಾರ ಮೈಯ್ಯ ಮರೆಸಿತ್ತು
ತಂಗಾಳಿ ಸೋಕಿರಲು ತೊಟ್ಟು ಕಳಚಿತ್ತು
ಅರಳುವ ಮುನ್ನವೇ ಹೂವು ನೆಲ ಕುರುಳಿತ್ತು
ಎಚ್ಚರವು ಮೂಡುವ ಹೊತ್ತಿಗೆ ಕಾಲ ಮಿಂಚಿತ್ತು//

ಪಸಿರು–ಹಸಿರು


ಗೊರೂರು ಜಮುನ

3 thoughts on “ಗೊರೂರು ಜಮುನ ಕವಿತೆ-ಅರಳುವ ಮುನ್ನವೆ

    1. , ಹಂಬು— ಬಳ್ಳಿ ನಂಬಿಕೆಯ ಬಳ್ಳಿ ಎಂಬ ಪದ ಬಳಸಿದ್ದೇನೆ ಸಾರ್

Leave a Reply

Back To Top