ಯೋಗೇಂದ್ರಾಚಾರ್ ಎ ಎನ್-ನಿಮಗೆ ನೆನಪಾಗಬೇಕಿತ್ತು

ಕಾವ್ಯ ಸಂಗಾತಿ

ಯೋಗೇಂದ್ರಾಚಾರ್ ಎ ಎನ್

ಮಣಿಪುರದಲ್ಲಿ ನಡೆದ ಬುಡಕಟ್ಟು ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು
ಅತ್ಯಾಚಾರವನ್ನು ಖಂಡಿಸಿ ಬರೆದ ಪ್ರತಿರೋಧದ ಕವಿತೆ

ನಿಮಗೆ ನೆನಪಾಗಬೇಕಿತ್ತು

ಆಕೆಯ ಜುಟ್ಟು ಹಿಡಿದು
ದರದರನೆ ಎಳೆವಾಗ
ನಿಮ್ಮ ಕೈಗಳಿಗೆ ಮುತ್ತಿಟ್ಟ
ತಾಯಿಯ ನೆನಪಾಗಬೇಕಿತ್ತು

ವಿಕೃತಗೊಂಡು
ತೊಗಲು ಮುಚ್ಚಿದ
ಬಟ್ಟೆಯನು ಒಂದಿಂಚೂ ಬಿಡದೆ
ಕಿತ್ತೆಸೆದು ನಗುವಾಗ
ನಿಮ್ಮ ಮರ್ಮಾಂಗಕ್ಕೆ
ಚಡ್ಡಿ ತೊಡಿಸಿದ
ಕೈಗಳು ನೆನಪಾಗಬೇಕಿತ್ತು

ಮುಗ್ದ ಹೆಣ್ಣಿನ
ಎದೆಗೆ ಕೈ ಹಾಕಿ
ಸ್ತನಗಳ ಘಾಸಿಗೊಳಿಸಿ
ಹಲ್ಕಿರಿಯುವಾಗ
ಎದೆ ಹಾಲುಣಿಸಿದ
ತೊಟ್ಟುಗಳು ನೆನಪಾಗಬೇಕಿತ್ತು

ಈ ಜಗಕೆ ಬಂದ ದಾರಿಯ ನೆನಪಿಲ್ಲದೆ
ನಿಮ್ಮ ಪೌರುಷತ್ವದ ಪಾರಾಕಾಷ್ಠೆ ಮೆರೆದು
ಬಯಲಲ್ಲೇ ಸ್ಖಲಿಸಿ ಬೆರಳಿಟ್ಟ ನಿಮಗೆ
ಒಮ್ಮೆ ನಿನ್ನ ತಾಯಿಯ ಮುಖ ನೆನಪಾಗಬೇಕಿತ್ತು

ಮೌಢ್ಯ ಧರ್ಮಾಂದಕಾರವನ್ನೇ ತುಂಬಿಕೊಂಡ
ನಿಮ್ಮ ಭಂಡ ಬದುಕಿನ ದಾರಿಯಲ್ಲಿ
ಆಕೆಯನು ರಸ್ತೆಯಲಿ
ಬೆತ್ತಲೆ ಮೆರೆಸುವಾಗ
ನಿಮ್ಮ ತಾಯಿಯ ಉಂಗುಷ್ಟವಾದರೂ
ನೆನಪಾಗಬೇಕಿತ್ತು ನೆನಪಾಗಬೇಕಿತ್ತು


ಯೋಗೇಂದ್ರಾಚಾರ್ ಎ ಎನ್

One thought on “ಯೋಗೇಂದ್ರಾಚಾರ್ ಎ ಎನ್-ನಿಮಗೆ ನೆನಪಾಗಬೇಕಿತ್ತು

Leave a Reply

Back To Top