ಪ್ರಭಾ ಅಶೋಕ ಪಾಟೀಲ ಕವಿತೆ-ಅತಿವೃಷ್ಟಿ( ಮುನಿದ ವರುಣ )

ಕಾವ್ಯ ಸಂಗಾತಿ

ಪ್ರಭಾ ಅಶೋಕ ಪಾಟೀಲ ಕವಿತೆ-

ಅತಿವೃಷ್ಟಿ( ಮುನಿದ ವರುಣ )

ಮುನಿದ ವರುಣ ಸುರಿಸಿ ಹನು
ಧಾರಾಕಾರವಾಗಿ ನಿರಂತರ ಮಳೆಯನು
ಮುಗಿಲೇ ಹರಿದು ನೀರಾಗಿ ಹರಿದಂತೆ
ಎತ್ತ ನೋಡಿದತ್ತ ರುದ್ರನರ್ತನ ವು

ಕುಸಿತ ಗೋಡೆಗಳಡಿಯಲಿ
ಸಿ ಲುಕಿ ನಲು ಗಿದವರ ಆಕ್ರಂದನವು
ಹೊಲ ಗದ್ದೆಗಳ ನಾಶವು
ರೈತನ ಬದುಕದು ಅಸ್ತವೆಸ್ತವು

ಮನೆ ಮಠಗಳ ಕಳೆದುಕೊಂಡವರೆಷ್ಟು
ಹಸು ಕರು ಪ್ರಾಣಿಗಳ ಸಾವು ಅದೆಷ್ಟು
ಕಣ್ಣೀರ ಕಡಲಲ್ಲಿ ಕೈತೊಳೆದವರೆಷ್ಟು
ನಿನ್ನೆ ಆರ್ಭಟಕ್ಕೆ ಬೋರಮೆಯು ನಡುಗಿಹಳು

ಕಾಡು ಮೇಡು ಕಡಿದರು
ಹಣದಾಸೆಗೆ ಭೂರಮೇ ಯ ಬಗೆದರು
ತೀರದಾ ದಾಹಕೆ ಸಿಲುಕಿದರು
ಪ್ರಕೃತಿ ಮಾತೆಗೆ ಅತ್ಯಾಚಾರವೆತಗಿದರು

ಹೀಗೇಕೆ ಮುನಿಸು ವರುಣಾ
ನಿನಗಿಲ್ಲವೇ ನಮ್ಮ ಮೇಲೆ ಕರುಣಾ
ಪ್ರಕೃತಿ ಮಾತಿಗೆ ನಾವು ಕೊಟ್ಟ ಪೆಟ್ಟೇ ಕಾರಣ
ಅದ ಅರಿತ ರು ಕಣ್ಣಿದ್ದರೂ ಕುರುಡರು ಈ ಜನ


ಪ್ರಭಾ ಅಶೋಕ ಪಾಟೀಲ

Leave a Reply

Back To Top