ಕಾವ್ಯ ಸಂಗಾತಿ
ಸುಧಾ ಪಾಟೀಲ ಕವಿತೆ
ಅರಳಿದವು ಮಲ್ಲಿಗೆ
ಮುಂಜಾವಿನ ಇಬ್ಬನಿಯಲಿ
ನೇಸರನು ಬರುವ ಇರುವಿನಲಿ
ಮೌನದ ಮೊಗ್ಗೊಡೆದು
ಮೆಲ್ಲಗೆ ಘಮಘಮಿಸುತ
ಅರಳಿದವು ಮಲ್ಲಿಗೆ
ಹಸಿರೆಲೆಯ ಮಧ್ಯದಲಿ
ಸುಗಂಧವ ಬೀರುತಾ
ಮಂದಸ್ಮಿತದಿ ಮಿಂಚುತಾ
ಮನೋಹರತೆಯ ಚೆಲ್ಲುತಾ
ಅರಳಿದವು ಮಲ್ಲಿಗೆ
ಬೆಳದಿಂಗಳೇ ತಾನಾದಂತೆ
ಬಳ್ಳಿಯ ತಬ್ಬುವ ಮೋಹದಿ
ಮಮಕಾರದ ಮಮತೆಯ
ಮೋಹಕಲಾಸ್ಯವ ಒಂದುಗೂಡಿ
ಅರಳಿದವು ಮಲ್ಲಿಗೆ
ಒಲವಿನಿಂದ ಮೆಲ್ಲಗೆ
ತಂಗಾಳಿಯ ಬೆರೆಸಿ
ನಳನಳಿಸುತ ಹೊಮ್ಮಿ
ಮುಡಿಯೇರಲು ಕಾದು
ಅರಳಿದವು ಮಲ್ಲಿಗೆ
ಹೊಳೆವ ನಕ್ಷತ್ರಗಳ ಕಳೆದು
ಬಾನಿನ ಬೆಳಗಿನ ಕಲರವದಿ
ಹೊಂಬಿಸಿಲು ಮೂಡಿದಾಗ
ಸದ್ದಿಲ್ಲದೆ ಸಡಗರದಿ
ಅರಳಿದವು ಮಲ್ಲಿಗೆ
ಸುಧಾ ಪಾಟೀಲ
ಸೂಪರ್ ಕವನ
ಕವನ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು ಕವನ ಮೆಚ್ಚಿದ ಕವಿ
ಮನಸುಗಳಿಗೆ