ಕಾವ್ಯ ಸಂಗಾತಿ
ಮಣಿಪುರದಲ್ಲಿ ನಡೆದ ಬುಡಕಟ್ಟು ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು
ಅತ್ಯಾಚಾರವನ್ನು ಖಂಡಿಸಿ ಸುರೇಖಾ ರಾಠೋಡ್ ಬರೆದ ಪ್ರತಿರೋಧದ ಕವಿತೆ
“ನಾನುನಿಮ್ಮಯುದ್ಧಭೂಮಿಯಲ್ಲ!
ಡಾ.ಸುರೇಖಾ ರಾಠೋಡ್.
ಅಂದ ಧರ್ಮ ಪಾಲಕರೇ,
ಕಣ್ಣಿದ್ದು ಕುರಡರೇ, ಅಹಂಕಾರಿಗಳೇ
ಕಾಡುಮೃಗಗಳೇ,
ಧರ್ಮದ ಹೆಸರಿನಲ್ಲಿ,
ಹೆಣ್ಣು ದೇಹಗಳ ಮೇಲೆ
ಅತ್ಯಾಚಾರ ಮಾಡುವ ಅತ್ಯಾಚಾರಿಗಳೇ,
ನಿಮಗೆ ಯುದ್ಧ ಭೂಮಿ
ಹೆಣ್ಣಿನ ದೇಹ ಅಲ್ಲವೇ?
ಕಾದಾಟವಾಡಲು,
ಹೆಣ್ಣು ದೇಹಬೇಕಲ್ಲವೇ?
ತೆವಲಿನ ಪತಾಕೆ ಹಾರಿಸಲು,
ಹೆಣ್ಣು ದೇಹಬೇಕಲ್ಲವೇ?
ಪೌರುಷ, ಗಂಡಸುತನ
ಪ್ರರ್ದಶಿಸಲು,
ಹೆಣ್ಣು ದೇಹ ಬೆತ್ತಲೆಗೊಳಿಸಿ,
ಮರವಣಿಗೆ ಮಾಡಿ,
ಹತ್ಯೆಗೈಯುವುದೇ?
ಈ ಪಾಪಿಗಳಿಗೆ ಧರ್ಮ ರಕ್ಷಕರೇ
ಕಲಿಸಲಿಲ್ಲವೇ ಪಾಠವ ?
ಹೆಣ್ಣು ದೇವತೆ,
ಭೂತಾಯಿ, ಜನ್ಮದಾತೆ, ಅನ್ನದಾತೆವೆಂದು..
ಗೊಡ್ಡು ಸಂಪ್ರದಾಯವಾದಿಗಳೆ,
ಹೇಳಲಿಲ್ಲವೇ,
ಹೆಣ್ಣು ಮುನಿದರೆ ಚಂಡಿ ಚಾಮುಂಡಿ
ನರರಾಕ್ಷಸರನ್ನು ಸುಟ್ಟು ಬೂದಿ ಮಾಡುವವಳೆಂದು..
ಮನುವಾದಿಗಳೇ… ಹೇಳುತ್ತಿರುತ್ತಿರಲ್ಲವೇ
ಹೆಣ್ಣು,
ಅಪ್ಪ, ಗಂಡ, ಮಗ, ಅಣ್ಣ, ತಮ್ಮಂದಿರ
ರಕ್ಷಣೆಯಲ್ಲಿ ಬೆಳೆಯುವವಳೆಂದು :
ಹೆಣ್ಣು ದೇಹವ ಬೆತ್ತಲೆ ಗೊಳಿಸಿ
ಮೆರವಣೆಗೆ ಮಾಡುವವರಲ್ಲಿ
ಯಾರು ಇರಲಿಲ್ಲವೇ?
ಅಣ್ಣ, ತಮ್ಮ, ಅಪ್ಪವೆಂದೆನಿಸಿಕೊಳ್ಳುವವರು?
ಇದನ್ನಾ ಹೇಳುವುದು ನಿಮ್ಮ
ಧರ್ಮವು ?
ನಿಮ್ಮ ವಿಭಜನೆಯ ದ್ರೋಹಕ್ಕೆ
ಹೆಣ್ಣು ದೇಹವ ಬೆತ್ತಲೆಗೊಳಿಸಿ
ಮೆರವಣಿಗೆ ಮಾಡಲು?
ಗೊಡ್ಡು ಸಂಪ್ರದಾಯವಾದಿಗಳೇ,
ಕೋಮುವಾದಿಗಳೇ,
ಮನುವಾದಿಗಳೇ,
ನಕಲಿ ಧರ್ಮ ರಕ್ಷಕರೇ,
ತಿಳಿದುಕೊಳ್ಳಿ, ಅರಿತುಕೊಳ್ಳಿ :
ಹೆಣ್ಣು ದೇಹವು
ನಿಮ್ಮ ಯುದ್ಧ ಭೂಮಿಯಲ್ಲ,
ರಣರಂಗವೂ ಅಲ್ಲ..
ಎಚ್ಚರ ಎಚ್ಚರ ಎಚ್ಚರ….
————————————————
ಡಾ.ಸುರೇಖಾ ರಾಠೋಡ್. ವಿ
ಖಂಡಿತ ,ಪ್ರತಿಭಟನೆ ಇದೆ,