ಕಾವ್ಯ ಸಂಗಾತಿ
ಕವಿದ ಮೋಡದಲ್ಲಿ ಕರಗಿದ ಮೌನ
ಈರಮ್ಮ.ಪಿ.ಕುಂದಗೋಳ
ಕವಿದ ಮುಂಗಾರಿನ ಮೋಡ ಮುನಿಸುವಂತೆ
ಧರೆಯ ಅಳುವ ರವಿಯ ಕಿರಣ ಮರೆಮಾಚಿದಂತೆ
ಉಲ್ಲಾಸದ ಚಿಲುಮೆಯಿಲ್ಲದೆ ಬೇಸರ ಮೂಡಿದಂತೆ
ಹೇಗೆ ಕಳೆಯಲಿ ಈ ದಿನ ಉರುಳುವಂತೆ!
ಚೆಲುವಿನ ಆಗಸ ಮಂಪರು ಕವಿದಂತೆ
ಮನಸ್ಸು ಮಾಯವಾಗಿದೆ ಬರ ಸಿಡಿಲಿನಂತೆ
ಕಾಮನ ಬಿಲ್ಲು ಕಾನನದಿ ಮರೆಯಾದಂತೆ
ಕಾಡ್ಗಿಚ್ಚು ಸುರಿವಂತೆ ಮೌನವಾದಂತೆ!
ಮಾತಿನ ಲಹರಿಯು ಮೌನದಿ ಸೆರೆಯಾದಂತೆ
ಭಾವಗಳು ಬೆಸೆಯುವ ಕೊಂಡಿ ಸಡಿಲವಾದಂತೆ
ಸಂಬಂಧದ ಸುಳಿವಿಲ್ಲದೆ ನೋವಾದಂತೆ
ಕಂಬನಿಯಯ ಧಾರಿಯಲಿ ಒಲವಾದಂತೆ
ಕೆನೆಮೊಸರು ಇಲ್ಲದ ಸಪ್ಪ ಮಜ್ಜಿಗೆಯಂತೆ
ಸಜ್ಜೆಯೊಳಗಿನ ಹೆಜ್ಜೆಯು ಮೂಡಿ ನುಲಿಯುವಂತೆ
ಕವಿಯ ಮನವು ಹಾಡದೆ ಮೂಕವಾದಂತೆ
ಕವಿದ ಮೋಡದಲ್ಲಿ ಮೌನ ಕರಗಿ ಮಾತದಂತೆ.
ಈರಮ್ಮ.ಪಿ.ಕುಂದಗೋಳ