ಡಾ ಡೋ.ನಾ.ವೆಂಕಟೇಶ ಕವಿತೆ-ಮಳೆಯಲ್ಲಿ ನನ್ನಾಕ್ಷಿ

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಮಳೆಯಲ್ಲಿ ನನ್ನಾಕ್ಷಿ

ಧೋ ಎಂದು ಸುರಿವ ಸೊಗಸು
ಬಾ ಎಂದಾಗ ಬರದ ನಿನ್ನ ಮುನಿಸು
ಬಾರದಾಗ ಬರೀ ನಿನ್ನ ಕನಸು

ಸುರಿವ ಮಳೆಗೂ ,ಇಳೆಗೆ
ಅವತರಿಸುವ ಇವಳಿಗೂ
ಬಲು ದಿಮಾಕು
ಬಂದಾಗ ದೌಲತ್ತು
ಬಾರದಾಗ ಹಿಕ್ ಮತ್ತು

ಮಳೆ ಹೀಗೇ
ಕಾದ ಭೂಮಿ ಹಸಿವಿಂದ
ಕಂಗಾಲು
ಮುಂಗಾರು ಪೂರ್ವ ಮಳೆ
ಬಂದಾಗಷ್ಟೆ ಹೊಳೆ
ಬಾರದಾಗ ಕಂಪನ
ಮಿಂಚಿನ ಸಿಂಚನ !

ಪೂರ್ವ ಮುಂಗಾರು ಮಳೆ
ಮುಂದಡಿಯಿಟ್ಟಾಗ ನೀ
ಪುನರ್ವಸು
ಚಿಕ್ಕ ಪುಷ್ಯ ಬೆಳೆದು ನಿಂತಾಗ
ದೊಡ್ಡ ಪುಷ್ಯ!

ಥೇಟ್ ನಿನ್ನ ಹಾಗೇ ಕಣೆ
ಈ ಮಳೆ
ಇಳೆಯಲ್ಲಿ ಹೊಳೆ-
ಜಲಜಾಕ್ಷಿ
ತೋಯಜಾಕ್ಷಿ !!


ಡಾ ಡೋ.ನಾ.ವೆಂಕಟೇಶ

13 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಮಳೆಯಲ್ಲಿ ನನ್ನಾಕ್ಷಿ

  1. “ಮಳೆಯಲ್ಲಿ ನನ್ನಾಕ್ಷಿ” ಕವನ ಸರ್ ಮತ್ತು ಸೊಗಸು. ಅಭಿನಂದನೆ ನಿಮಗೆ ಪ್ರಿಯ ವೆಂಕಟೇಶ್

  2. ಸರಳ ಮತ್ತು ಸೊಗಸು ಎಂದು ಓದಿಕೊಳ್ಳಿ

  3. ಬಂದಾಗ ದೌಲತ್ತು, ಬಾರದಿದ್ದಾಗ ಹಿಕ್ಮತ್ತು..
    ಯಾಕಣ್ಣ… ಅತ್ತಿಗೆ ಏನ್ ಮಾಡಿದ್ರು
    ಎಂದಿನಂತೆ ಸುಂದರ ಕವನ

  4. ಸೂರ್ಯ , ನಿಮ್ಮ ಈ ಪ್ರತಿಕ್ರಿಯೆ ನೋಡಿದರೆ-ಅಷ್ಟೇ. जीना मुश्किल हो जाता है
    Thanq Surya

  5. ನೀನಾಕ್ಷಿಯನ್ನು ತೇಜೋವಾಕ್ಷಿಯಾಗಿ
    ಮಳೆನೀರಿನಲ್ಲಿ ಪರಿವರ್ತಿಸುವ ನಿಮ್ಮ ಕಲ್ಪನೆಯು ಬಹಳ ಪ್ರಭಾವಶಾಲಿಯಾಗಿದೆ.
    ನಿಮ್ಮ ಕನಸು ನನಸಾಗಲಿ ಎಂದು ಆಶಿಸುತ್ತೇನೆ

  6. ಚೆನ್ನಾದ ಅಕ್ಷಿಗಳಿಗೆ ಕಾಣಿಸಿದ್ದೆಲ್ಲ ಚೆನ್ನ,ಮಂಜಣ್ಣ ! Thanq Manjunath pai

Leave a Reply

Back To Top