ವೈ. ಎಂ.ಯಾಕೊಳ್ಳಿಕವಿತೆ ‘ಸೂತ್ರವಿಲ್ಕದ ಗಾಳಿಪಟದ ದಾರಿ ಹುಡುಕುತ್ತ’

ಕಾವ್ಯ ಸಂಗಾತಿ

ವೈ. ಎಂ.ಯಾಕೊಳ್ಳಿಕವಿತೆ

‘ಸೂತ್ರವಿಲ್ಕದ ಗಾಳಿಪಟದ ದಾರಿ ಹುಡುಕುತ್ತ’

ಸಮಯ ಓಡುತಿದೆ
ದಿನ ನಮ್ಮವಲ್ಕ
ಕಾಯುತ್ತ ಕೂಡಲು.
ದೀರ್ಘಾಯುಷಿಗಳು
ನಾವಲ್ಲ
ಇರುವದೇನಿದ್ದರೂ
ಇಲ್ಲಿ ಅವಸರದ ಬದುಕು
ಎಲ್ಲದಕೂ..

ಯಾರಿದ್ದರೂ
ಇರದಿದ್ದರೂ ಹೇಗು ಹೇಗೆಯೋ
ಓಡುತ್ತದೆ ಬಾಳು.ಇಲ್ಲ ಅದಕೆ
ನಿಜವಾದ ಒಬ್ಬ ದಾತಾರ
ಅವನಿದ್ದಾಗ ಅವನೊಡನೆ
ಇವನಿದ್ದಾಗ ಇವನೊಡನ
ತೂಕ ಹಾಕಲು ತಕಲಿ ಸಿದ್ಧ

ಯಾರ ಕೂಲಿಯ ಯಾ ರೂ
ಪಡೆಯಲಾರರು ಅವರವರ
ಹಾಸಿಗೆ ಅವರ ಹೆಗಲ ಮೇಲೆ
ಮುಂಜಾನೆ ಎದ್ದು ಯಾವ ಚಾಲನ್ನಿನ‌
ಜೋತಿಷ್ಯ ಕೇಳಿದರೂ
ತಪ್ಪುವದಿಲ್ಲ ಆಗುವ ಅವಘಡ

ಹೆಗಲ ಮೇಲೆ ಹೆತ್ತು
ಮಲಮೂತ್ರ ಬಾಚಿ
ಸಾಕಿದ ವಾರಸುದಾರರೂ
ಹೊಗುವವರೇ ಅವರ
ದಾರಿ ಹಿಡಿದು
ಅವರ ಬಾಳಿನ ಸೂತ್ರದ
ಪಾತ್ರ ಬರೆಯಲು
ನಮಗೆಲ್ಲಿದೆ ಹಕ್ಕು?

ಸಾಗಿದೆ ಪಯಣ
ತಲೆಮಾರಿನಿಂದ ತಲೆಮಾರಿಗೆ
ಎಲ್ಲ ನನ್ನ ಪರಭಾರೆಯಲೇ ಎಂದು
ಸಾವಿರ ವರುಷವಾಳಿದವನೂ ಎಲ್ಲ
ಬಿಟ್ಟು ನಡೆದಿದ್ದಾನೆ ಇಲ್ಲಿ
ನಮ್ಮ‌ನಿಮ್ಮದೂ ಅದೇ ಪಾಳಿ!

ನಿಜದ ನಡೆಯಂಬುದು ಸಿಕ್ಕಿದೆ.
ಎಲ್ಲೋ ಬೆರಳೆಣಿಕೆಯ ಸಂಖ್ಯೆಯ
ಮಹನೀಯರಿಗೆ
ನಾನು ,ನೀನು ಎಲ್ಲ
ಪಗಡದಾಳಗಳಷ್ಟೇ ಇಲ್ಲಿ

ತಿಳಿವಿನ ಹಾದಿಯಲಿ.
ಅದೆಷ್ಟು ಜನರ ಪಾಳಿ
ನಮ್ಮತನಕ ಬಂದರೆ
ನಮ್ಮ ಭಾಗ್ಯ
ಬಾರದಿದ್ದರೂ ಇದ್ದೆ ಇದೆ
ಮೂರಡಿ ಆರಡಿ ಜಾಗದ
ಶಾಸ್ವತ ಸೌಭಾಗ್ಯ

ಇದು ಸೂತ್ರವಿಲ್ಲದ
ಗಾಳಿಪಟ ಮಾತ್ರವಲ್ಲ
ಸೂತ್ರ ನಿಲ್ಲದ
ಗಾಳಿ ಪಟವೂ ಕೂಡ….


ವೈ ಎಂ.ಯಾಕೊಳ್ಳಿ

Leave a Reply

Back To Top