“ಬೆತ್ತಲೆ ಮೆರವಣಿಗೆ” ಕವಿತೆ-ಇಂದಿರಾ.ಕೆ

ಕಾವ್ಯ ಸಂಗಾತ

ಇಂದಿರಾ.ಕೆ

ಬೆತ್ತಲೆ ಮೆರವಣಿಗೆ

ಬಹುದಿನಗಳ ದಂಗೆ ಮಣಿಪುರದ ಹಿಂಸಾಚಾರ
ನಾಯಕರಾರು ತಲೆಕೆಡಿಸಿಕೊಳ್ಳದ ವಿಚಾರ…

ಜನಾಂಗೀಯ, ರಾಜಕೀಯಗಳ ಕಾದಾಟ
ಸಮುದಾಯ, ಮೀಸಲಾತಿಗಳ ಹೋರಾಟ…

ಹೆಣ್ಣಿನ ಬೆತ್ತಲೆ ಮೆರವಣಿಗೆ
ಮನುಕುಲ ತಲೆ ತಗ್ಗಿಸುವ ಘಟನೆ
ಬೆತ್ತಲಾಗಿದ್ದು ಈ ದೇಶದ ಮರ್ಯಾದೆ, ಮಾನವೀಯತೆ
ಈ ಪೈಶಾಚಿಕ, ಘನಘೋರ ಪರಿಸ್ಥಿತಿ ಅಸಹನೀಯ, ಅಮಾನವೀಯ…

ಹೆಣ್ಣಿನ ಮೇಲೆ ಆತ್ಯಾಚಾರ, ಬಲಾತ್ಕಾರ
ಅವಳಿಗೇಕೆ ಇಷ್ಟೆಲ್ಲಾ ಶೋಷಣೆ, ನಿಂದನೆ…?
ಹೆಣ್ಣು ಬರೀ ಭೋಗದ ವಸ್ತುವೇ..?
ಅವಳಿಗಿಲ್ಲವೇ ಸಮ್ಮಾನ ಸ್ವಾಭಿಮಾನ…?

ಎತ್ತ ಸಾಗುತಿಹುದು ಈ ದೇಶದ ಸಂಸ್ಕೃತಿಯ ಪಥ
ಸಮಾಜದ ಹುಳುಗಳಾದ
ಪುಂಡ – ಪೋಕರಿಗಳನ್ನು, ವಿಕೃತ – ರೂಪಿಗಳನ್ನು, ಕಾಮ – ಪಿಶಾಚಿಗಳನ್ನು
ಆರಿಸಿ ಎಸೆಯಬೇಕಿದೆ
ಗುಂಡಿಕ್ಕಿ ಕೊಲ್ಲ ಬೇಕಿದೆ…

ಕೊಳಕು ತುಂಬಿದೆ ನರರಾಕ್ಷಸರಲ್ಲಿ
ಶುದ್ದಿ ಮಾಡಲಾರದಷ್ಟು
ಹೊಲಸು ತೊಳೆಯಲಾರದಷ್ಟು…

ಕ್ರೂರತೆ ಮೆರೆದ ಕ್ರೂರಿಗಳಿಗಿಲ್ಲಿ
ಆಗಬೇಕಿದೆ ಒಂದೇ ಗಲ್ಲುಶಿಕ್ಷೆ
ಆಗಷ್ಟೇ ಅಲ್ಲವೇ ಹೆಣ್ಣಿಗೆ ಸ್ವೇಚ್ಛೆ, ನಿಟ್ಟುಸಿರು, ನಿರಾತಂಕ…


  ಇಂದಿರಾ.ಕೆ

Leave a Reply

Back To Top