ಕಾವ್ಗ ಸಂಗಾತಿ
ಪಕಳೆಗಳೊಂದಿಗೆ ಪಗಡೆಯಾಟ
ಮಹಾಂತೇಶ್.ಬಿ.ನಿಟ್ಟೂರು
ಓಡುತಿವೆ ಕುದುರೆಗಳು ವೇಗವಾಗಿ
ಅರಸ ಅರಸಿಯರ ಕೂರಿಸಿಕೊಂಡು….
ಅಕ್ಕ-ಪಕ್ಕ, ಹಿಂದೆ ಮುಂದೆ
ಕಾಲಾಳು, ಭಟರ ದಂಡು!
ವೃತ್ತದ ಗೆರಯಾಚೆಯೇ ಓಡಾಟ,
ಒಡನಾಟ
ದಾಸವಾಳದ ಪಕಳೆಗಳೊಂದಿಗೆ
ಪಗಡೆಯಾಟ!
ಏಗುತ್ತಾ ಸಾಗಿವೆ ಕತ್ತೆಗಳು
ರಣ ಬಿಸಿಲಿನಲ್ಲಿ, ಮಳೆ ಗಾಳಿಯಲ್ಲಿ
ಹೊತ್ತುಕೊಂಡೇ ಮಣ ಭಾರ,
ಹಾದಿ ಬದಿಯ ನೆರಳು
ಸರಿಯುತಿಹುದು ದೂರ !
ಕಂಡೂ ಕಾಣದಂತೆ….
ಬುಸುಗುಡುತ್ತಿವೆ ಖಾಲಿ ಹುತ್ತ
ಹಾವಿನ ಪೊರೆ ಮಾತ್ರ
ಹರಿದಾಡುತ್ತಿದೆ ಸುತ್ತ ಮುತ್ತ…..!
ಮಾನವನ ನವ ನವೆಗೆ
ವಾಡಿಕೆ ಹುಸಿ, ವಾಡೆ ಬಿಸಿ !
ಮಹಾಂತೇಶ್.ಬಿ.ನಿಟ್ಟೂರು
ಅದ್ಬುತ
Thank you
ಬಹು ಸುಂದರ
Thank you
ಚಂದದ ಕವಿತೆ
Thank you