ಕಾವ್ಯಸಂಗಾತಿ
ಮರಣ ಮೃದಂಗ
ಡಾ ಅನ್ನಪೂರ್ಣ ಹಿರೇಮಠ
ಮರಣ ಮೃದಂಗ ಬಾರಿಸದಿರದು ಒಮ್ಮೆ
ಬಂದಾಗ ಹೋಗಬೇಕು ನಾವು ಸುಮ್ಮನೆ//ಪ//
ಹುಟ್ಟಿದ ಗಳಿಗೆಯಿಂದಲೇ ಬೆನ್ನತ್ತಿಹುದು
ಬಿಟ್ಟುಬಿಡದೆ ಕಾಡುತಲೆ ಇಹುದು
ಗಟ್ಟಿಯಾಗಿರದೆ ಬಾಳಲು ಬಿಡದು
ಮೆಟ್ಟಿ ನಿಂತು ಬಾಳದಿರೆ ಬದುಕೇ ಇರದು//
ಬಾಳು ಒಂದು ಎಲ್ಲ ತುಂಬಿದ ಸಂತೆ
ಕಷ್ಟ ಸುಖ ಇಹವಿಲ್ಲಿ ಕಂತೆ ಕಂತೆ
ಬಾಳಿ ಬದುಕಿ ಹೋಗಬೇಕು ಮರೆಯದಂತೆ
ಕಾಯಕದಲಿ ನೆಮ್ಮದಿ ಕಾಣಬೇಕು ಬಿಟ್ಟು ಚಿಂತೆ//
ಹುಟ್ಟುಸಾವಿನ ಜೀವನದಿ ಜಟ್ಟಿಯಾಗಿರಬೇಕು
ಸಾಧಿಸುವ ಛಲದಿ ದಿಟ್ಟ ನಡೆಯಿರಬೇಕು
ಸುಟ್ಟ ಮಣ್ಣಂತೆ ಅಟ್ಟ ಅಡಿಗೆಯಂತಿರಬೇಕು
ಕೆಟ್ಟಕೆಲಸಗಳ ಬಿಟ್ಟು ಸಾರ್ಥಕತೆ, ಹಾದಿಯಲಿರಬೇಕು//
ದೇವದೇವನ ಪಾದವ ಸೇರಲು
ತನ್ನ ಸುಖದಲಿ ಇತರರ ಸುಖ ಕಾಣಲು
ಪರಹಿತ ಪರೋಪಕಾರದಲಿ ಮನವಿಡಲು
ಮರಣದಲೆ ಮಹಾನಮಾಮಿ ಆಗಲು//
ನಿನ್ನತನ ನಿಜದ ಗುಣ ಹೊಂದುತ
ನಡೆ ನುಡಿಯಲೊಂದಾದ ಬಾಳ್ವೆ ಬಾಳುತ
ನೀತಿ ನಿಯಮ ಸತ್ಯ ಸಂದತೆ ಅರಳಿಸುತ
ಮರಣವ ಗೆದ್ದು ಬಾಳಬೇಕು ನಗುತ//
ಸಾರ್ಥಕವಾಗಿರಬೇಕು ನಮ್ಮ ಪಯಣ
ಏರಿ ನಿಲ್ಲಬೇಕು ಗುರಿಯ ಗಗನ
ಸೆಳೆಯುವಂತಿರಬೇಕು ಶಿವನ ನಯನ
ಸತ್ತರೂ ಇದ್ದಂತಿರಬೇಕು ನಮ್ಮ ಜೀವನ//
ಡಾ ಅನ್ನಪೂರ್ಣ ಹಿರೇಮಠ
ಕವನದ ಕೊನೇ ಪ್ಯಾರಾ ತುಂಬಾ ಅರ್ಥಗರ್ಭಿತ ವಾಗಿದೆ. ಕವನ ತುಂಬಾ ಚೆನ್ನಾಗಿದೆ
ಅರ್ಥಪೂರ್ಣ ಕವನ ಕೊನೆಯ ಸಾಲುಗಳು ಮಾರ್ಮಿಕವಾದದ್ದು.
ತುಂಬ ಅರ್ಥಗರ್ಭಿತವಾಗಿದೆ ಕವಿತೆ.