ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ
ವಿಶ್ವ ಪಥ
ಕಾಣುವ ಮನುಜನ
ಪ್ರೀತಿಯ ತೊರೆದು
ಕಾಣದ ದೇವಗೆ
ಕೈ ಮುಗಿಯುವೆವು
ಕಾಣುವ ಚಿಗುರೆಲೆ
ಹೂವ ಪತ್ರೆಯ ತಂದು
ಕಾಣದ ದೇವಗೆ
ಹಾಕುವೇವು
ಹಸಿದೊಡಲ ಬಡವಗೆ
ಅನ್ನವನಿಕ್ಕದೆ
ಕಲ್ಲಿನ ದೇವಗೆ
ಹಾಲಿನ ಹೊಳೆಯು
ದೇವರ ಹೆಸರಲಿ
ಕುರಿ ಕೋಣವ
ಕಡೆದು ಹಬ್ಬದ
ಮಾಂಸವ ಉಣ್ಣುವೆವು
ಪ್ರೀತಿಯೇ ದೇವರು
ನಂಬಿಕೆ ಭಕ್ತಿಯು
ಸತ್ಯ ಸಮತೆಯ ಸಜ್ಜೆವಿಶ್ವ
ಪಥದ ಹೆಜ್ಜೆಯು
ಡಾ ಶಶಿಕಾಂತ ಪಟ್ಟಣ
ಪ್ರೀತಿಯೇ ದೇವರು
ನಂಬಿಕೆ ಭಕ್ತಿಯು…
ಸತ್ಯ ಸಮತೆಯ ಸಾರುವ ನಿಮ್ಮ ವಿಶ್ವ ಪಥ
ನಿಜವಾಗಲೂ ಉದಾತ್ತ ಭಾವನೆಗಳಿ0ದ ಮತ್ತು ಶ್ರೇಷ್ಠ ವಿಚಾರಗಳಿಂದ ಮೂಡಿ ಬಂದ ಕವನ… ಸರ್
ಮನುಜಮತ ವಿಶ್ವಪಥ ಸಂದೇಶ ಸಾರುವ ಕವಿತೆ
Excellent poem
Very meaningful poem
ಏಷ್ಟು ಸುಂದರ ಭಾವ ಪ್ರಜ್ಞೆ ನಿಮ್ಮ ಕವನದಲ್ಲಿ ಮೂಡಿದೆ ಸರ್
ಅಧ್ಬುತ ಕಾವ್ಯ ಶೈಲಿ ಸರ್
ಕಾವ್ಯ ಶೈಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್