ವಚನಶ್ರಿ ಪಾಟೀಲ ಕವಿತೆ-ನಾದ ಸಂಗಮ

ಕಾವ್ಯ ಸಂಗಾತಿ

ವಚನಶ್ರಿ ಪಾಟೀಲ

ನಾದ ಸಂಗಮ

ನೀ ತೋಡಿಸಿದ
ಕಾಲ್ಗೆಜ್ಜೆಗಳು
ಪ್ರತಿ ಹೆಜ್ಜೆ
ಇಟ್ಟಾಗಲೂ
ನುಡಿಯುತಿವೇ
ಸಪ್ತಸ್ವರ
ನೀ ಬಂದು
ಶೃತಿಸೇರೆಸಿ
ಹಾಡಿಬಿಡು
ನಿನ್ನ ಒಲವ
ಹೃದಯದ ಸ್ವರ
ಸಂಭ್ರಮಿಸಲೀ
ನಾದ ಸಂಗಮ
ಮೀಟು ನನ್ನ
ವೀಣೆಯ ತಂತಿ
ಹೊರಡಲಿ
ಸ್ನೇಹ ಪ್ರೀತಿ
ಪ್ರೇಮ ಅನುರಾಗ


ವಚನಶ್ರಿ ಪಾಟೀಲ

Leave a Reply

Back To Top