ಇಂದಿರಾ.ಕೆ ಕವಿತೆ-ಮಳೆಯಲಿ ಜೊತೆಯಲಿ

ಕಾವ್ಯ ಸಂಗಾತಿ

ಮಳೆಯಲಿ ಜೊತೆಯಲಿ

ಇಂದಿರಾ.ಕೆ

ಮಳೆಯಲಿ ಜೊತೆಯಲಿ
ನೆನೆಯಿತು ತುಸು ಮೆಲ್ಲನೆ
ಹೃದಯವು ನಿಂತಲ್ಲೇ
ನಲಿಯಿತು ಪಿಸುಮಾತಲ್ಲೇ….

ಸ್ವರದಲಿ ದನಿಯಲಿ
ಹಾಡಿತು ರಾಗವನ್ನೇ
ಕಂಗಳು ಮಿಂಚಲ್ಲೇ
ಚೆಲ್ಲಿತು ರಂಗನ್ನೇ….

ಹನಿಯಲಿ ಜಡಿಮಳೆಯಲಿ
ಹಿತವಾಗಿ ಮಿಂದಲ್ಲೇ
ಮನವು ಕೂತಲ್ಲೇ
ಮರೆಯಿತು ತನ್ನನ್ನೇ….

ಖುಷಿಯಲಿ ನಗುವಲಿ
ನಾಚಿತು ಸುಮ್ಮನೇ
ತನುವು ಅಲ್ಲಲ್ಲೇ
ಕುಣಿಯಿತು ಹೆಜ್ಜೆಯಲೇ….


ಇಂದಿರಾ.ಕೆ

One thought on “ಇಂದಿರಾ.ಕೆ ಕವಿತೆ-ಮಳೆಯಲಿ ಜೊತೆಯಲಿ

Leave a Reply

Back To Top