ಇಂಗ್ಲೀಷ್ ಭಾಷೆ ಕವಿತೆಯ ಅನುವಾದ- ಮೆರವಣಿಗೆ

ಅನುವಾದ ಸಂಗಾತಿ

ಮೆರವಣಿಗೆ

ಮಣಿಪುರದಲ್ಲಿ ದುಷ್ಕರ್ಮಿಗಳಿಂದ ನಡೆದಿರುವ ಮಹಿಳೆಯರ ಬೆತ್ತಲೆ ಮೆರವಣಿಗೆ ನೋಡಿ ನಾಗಾ ಕವಯತ್ರಿ ನಿಂಗ್ರೆ ಚಾನ್ ಮರುಗಿ ಬರೆದಿರುವ ಇಂಗ್ಲಿಷ್ ಕವನದ ಅನುವಾದ

ಮೂಲ ಇಂಗ್ಲೀಷ್:ನಿಂಗ್ರ್ ಚಾನ್

ಕನ್ನಡಕ್ಕೆ ವಿಶು ಕುಮಾರ್

ನೀವು ಅವರನ್ನು ಬೆತ್ತಲುಗೊಳಿಸಿದಿರಿ
ಅವರನ್ನು ನಡೆಸಿದಿರಿ
ಅವರನ್ನು ಭೋಗಿಸಿದಿರಿ –
ನಿಮ್ಮ ಕಾಮ ,
ದ್ವೇಷಗಳಿಂದ
ಅದು ದೇಹ ದೇಹದ ನಡುವೆ
ಆದರೆ ;
ನೀವು ಯುದ್ಧ ಗೆದ್ದಿಲ್ಲ
ಬೆನ್ನು ಬಿದ್ದಿರುವ ನೀವು
ಅವರ ಆತ್ಮಗಳನ್ನು ತಟ್ಟಲಾರಿರಿ
ದೇವರು ಅವರ ಘನತೆಯನ್ನು ತಾನೇ ಮುಚ್ಚಿಟ್ಟಿದ್ದಾನೆ
ಅದು ಅವರ ಬೆತ್ತಲೆ
ದೇಹಗಳಲ್ಲಿಲ್ಲ .
ಅದನ್ನು ಗುಂಪು
ಹಿಂಡುಗಳಿಂದ
ಬೆತ್ತಲುಗೊಳಿಸಲಾಗದು .
ಆ ಧೀರ ಮಹಿಳೆಯರು
ಕಾಂಗ್ಲಾ ಕೋಟೆ
ಮುಂದೆ ತಾವೇ ಸ್ವಯಂ
ಬೆತ್ತಲಾದರು .
ಮಹಿಳೆ ಮಹಿಳೆಯರೇ !
ಹೌದು , ಸೋದರರೇ
ಹಿಂಸೆ ದೇಹ ದೇಹದ ನಡುವೆ
ಆದರೆ ತೀರ್ಪು
ಆತ್ಮ ಆತ್ಮಗಳ
ಜೊತೆ .
ಇಂದು ಕೇಕೆ ನಿಮ್ಮದು
ಇಂದು ಅಳು ನಮ್ಮದು
ನಾಳೆ ಅದು ದೇವರಿಗೆ
ಸೇರಿದ್ದು ..


One thought on “ಇಂಗ್ಲೀಷ್ ಭಾಷೆ ಕವಿತೆಯ ಅನುವಾದ- ಮೆರವಣಿಗೆ

  1. ಅನ್ಯಾಯ ಮತ್ತು ಅಮಾನವೀಯ ಕ್ರೂರತೆಯ ವಿರುದ್ಧದ ಕನ್ನಡದ ಪ್ರತಿರೋಧ.

Leave a Reply

Back To Top