ಭಾಗ್ಯಶ್ರೀ ಸಕನಾದಗಿ,ಕವಿತೆ-“ಸುಳಿವಿಗೆ ಸಿಕ್ಕ ಜೀವ”

ವಿದ್ಯಾರ್ಥಿ ವಿಭಾಗ

ಭಾಗ್ಯಶ್ರೀ ಸಕನಾದಗಿ

“ಸುಳಿವಿಗೆ ಸಿಕ್ಕ ಜೀವ”

ಜೀವನದ ಹಾದಿಯಲ್ಲಿ ಅದೆಷ್ಟೋ
ನೋವು ನಲಿವುಗಳು
ಬಡತನ ಎಂಬ ಬಂಧನದಿಂದ
ಸೋರುಗುತ್ತಿವೆ ಅದೆಷ್ಟೋ ಮುಗ್ಧ ಜೀವಗಳು

ಉಂಡವರೆಸ್ಟೋ ಹೊಟ್ಟೆಗೆ ಬಟ್ಟೆ ಕಟ್ಟಿ
ಉಪವಾಸ ಮಲಗಿದವರೆಸ್ಟೋ
ಅಡವಿಯಲ್ಲಿ ಅಲೆಯುತ್ತ ಅದೆಷ್ಟೋ
ಜೀವಗಳು ಬಿಸಿಲಿಗೆ ಬೆಂದಿರುವದೆಸ್ಟೋ

ಹರಕು ಬಟ್ಟೆಯ ತೊಟ್ಟು
ಮುರುಕಲು ಪಾಟಿ ಚೀಲ ಹೊತ್ತು
ಅಕ್ಷರ ಕಲಿಯಬೇಕೆಂಬ ಹಠದಿ ಹೊರಟು
ಜವಾಬ್ದಾರಿ ಹೊತ್ತು ಕೂಲಿಗೆ ಸೇರಿದ ಮಕ್ಕಳೆಸ್ಟೋ

ಬೀದಿಯಲ್ಲಿ ಬಿಕ್ಷೆ ಬೇಡುತ್ತಾ
ಅರೆ ಹೊಟ್ಟೆಯಲ್ಲಿ ಅಲೆಯುವರೆಸ್ಟೋ
ಸರಿಯಾದ ವಾಸಸ್ಥಳ ಇಲ್ಲದಿರಲು
ರೋಗರುಜಿನಗಳಿಂದ ಬಳಲುವರೆಸ್ಟೋ

ಸಣ್ಣಂದಿರಲ್ಲಿ ತಂದೆ ತಾಯಿಯರನ್ನು
ಕಳೆದುಕೊಂಡ ಶಿಶುಗಳೆಸ್ಟೋ
ಹಸಿವಿನಿಂದ ಕೊರಗಿ
ಮರೆಯಲ್ಲಿ ಕಣ್ಣಿರ ಒರೆಸುವರೆಸ್ಟೂ

ತಿಳುವಳಿಕೆ ಇದ್ದು ತಿದ್ದಲಾಗದೆ
ಮುನ್ನುಗುತ್ತಿರುವರೆಸ್ಟೋ
ವಿಧಿಯಿರದೆ ಶ್ರಮಿಸುತ್ತಿರುವ
ಚಿಗುರುವ ಕುಡಿಗಳೆಸ್ಟೋ

ದಿಕ್ಕೆತೋಚದ ಪಯಣಗಳೆಸ್ಟೋ
ಬಂದ ದಾರಿಯಲ್ಲಿ ಕಲ್ಲುಮುಳ್ಳುಗಳೆಸ್ಟೋ
ತಿಳಿಯುತ್ತಿದ್ದರು ಎಲ್ಲವೂ
ಹೊರೆಯಾಗಿ ಹೊರಳಾಡುವರೆಸ್ಟೋ

ಪಟ್ಟ ಬಂದ ಮೇಲೆ ಏರಿ ಬಂದ ಅಟ್ಟವನ್ನು
ಮರೆತು ಹೊದವರೆಸ್ಟೋ
ಹಲವು ತೆರನಾಗಿ ಸುಳಿವಿಗೆ ಸಿಕ್ಕಿ
ಅದೆಷ್ಟೋ ಜೀವಗಳು ಮರುಗುತ್ತಿರುವದೆಸ್ಟೋ

—————————————

ಭಾಗ್ಯಶ್ರೀ ಸಕನಾದಗಿ

One thought on “ಭಾಗ್ಯಶ್ರೀ ಸಕನಾದಗಿ,ಕವಿತೆ-“ಸುಳಿವಿಗೆ ಸಿಕ್ಕ ಜೀವ”

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಭಾಗ್ಯ

Leave a Reply

Back To Top