ಅಪ್ರತಿಮ ಪ್ರತಿಭೆಯ ಲಿಂಗೈಕ್ಯ ಡಾ ರೇಖಾ ಕೋಟೂರ

ನೆನಪು

ಅಪ್ರತಿಮ ಪ್ರತಿಭೆಯ ಲಿಂಗೈಕ್ಯ

ಡಾ ರೇಖಾ ಕೋಟೂರ

ಕೋಲಾಪುರ ಮೂಲದ ವಿಭೂತಿ ಮನೆತನದಲ್ಲಿ 1967 ರಲ್ಲಿ ಹುಟ್ಟಿ ಅಸಾಧಾರಣ ಪ್ರತಿಭೆಯ ರೇಖಾ ಅವರು ತಮ್ಮ MA ಹಿಂದಿ MA ಇತಿಹಾಸ PhD ಶಿಕ್ಷಣ PhD ಹಿಂದಿಯ ಮಾಡಿ ಹತ್ತಕ್ಕೂ ಅಧಿಕ ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಲೇಖನ ಬರೆದ ಅಪ್ಪಟ ಬಸವ ಪ್ರೇಮಿ .
ವಿಜಯನಗರ BEd ಕಾಲೇಜು ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಡಾ ರೇಖಾ ಕೋಟೂರ ಅವರು 35 ಅಧಿಕ ರಾಷ್ಟ್ರೀಯ ಕಾರ್ಯಾಗಾರ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಭಾರತದಲ್ಲಿ ಹಿಂದಿ ಭಾಷೆಯ ಪಠ್ಯ ಕ್ರಮ ಮತ್ತು ಬೋಧನಾ ರೀತಿಯ ಬಗ್ಗೆ ಪುಸ್ತಕ ಬರೆಯುವದರಲ್ಲದೆ ಅನೇಕ ಪ್ರಾತ್ಯಕ್ಷಿಕೆ ನೀಡಿದ್ದಾರೆ.
ಹಿಂದಿ ಪ್ರಾಧ್ಯಾಪಕಿ ಮರಾಠಿ ಭಾಷಿಕರಾದರೂ ಸಹಿತ ಕನ್ನಡ ಸಾಹಿತ್ಯದಲ್ಲಿ ವಿಶೇಷವಾಗಿ ವಚನ ಸಾಹಿತ್ಯದಲ್ಲಿ ಅಪಾರ ಜ್ಞಾನ ಆಸಕ್ತಿ ಹೊಂದಿದವರಾಗಿದ್ದು ಬಸವ ಟಿವಿಯಲ್ಲಿ ಅನೇಕ ವೈಚಾರಿಕ ಉಪನ್ಯಾಸ ಮತ್ತು ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ


ಅದೇ ರೀತಿ ಇಂಗ್ಲಿಷ್ ಭಾಷೆಯಲ್ಲೂ ನಿರರ್ಗಳವಾಗಿ ಮಾತನಾಡುವ ಮತ್ತು ಸಾಹಿತ್ಯ ಕೃಷಿ ಮಾಡುವ ಸಾಮರ್ಥ್ಯ ಹೊಂದಿದ್ದರು. ಸರಳ ಸಜ್ಜನಿಕೆಯ ಸಾಕಾರಮೂರ್ತಿ ಸ್ನೇಹ ಜೀವಿ ಪರೋಪಕಾರಿ ನಿಗರ್ವಿ ತಮ್ಮಲಿರುವ ಜ್ಞಾನವನ್ನು ಅನುಭವವನ್ನು ಹಂಚಿಕೊಳ್ಳುವ ಕ್ರಿಯಾಶೀಲ ವ್ಯಕ್ತಿಯಾಗಿದ್ದರು.
ವೃತ್ತಿ ಪ್ರವೃತ್ತಿಯನ್ನು ಸಮನ್ವಯಿಸಿಕೊಂಡು ಮಕ್ಕಳು ಮತ್ತು ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಇವರ ಯಜಮಾನರಾದ ಶ್ರೀ ಮಲ್ಲಿಕಾರ್ಜುನ ಕೋಟೂರ ಇವರು ಹೆಸ್ಕಾಂ ದಲ್ಲಿ ಅಸಿಸ್ಟೆಂ ಎಕ್ಜಿಕ್ಯುಟಿವ್ ಇಂಜನೀರ್ ಆಗಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಮಲ್ಲಿಕಾರ್ಜುನ ಅವರು ಸಹಿತ ಸ್ನೇ ಜೀವಿ ಜನಪರ ಕಾಳಜಿ ಇಟ್ಟವರು ಗಾಯಕರು ಸಾಹಿತ್ಯ ಪ್ರೇಮಿಗಳು ಸಹೃದಯಿಗಳು . ಡಾ ರೇಖಾ ಕೋಟೂರ ಅವರು 2019 ಜೂಲೈ 17 ರಂದು ಅಕಾಲಿಕ ಮರಣಕ್ಕೆ ತುತ್ತಾದರು. ಇವರ ಪಯಣ ಇಷ್ಟು ಬೇಗ ಮುಗಿಯುತ್ತದೆ ಎಂದು ಯಾರು ಅಂದು ಕೊಂಡಿರಲಿಲ್ಲ. ಶರಣರ ಬದುಕು ಮರಣದಲ್ಲಿ ಕಾಣು ಎಂದು ಹಿರಿಯರು ಹೇಳಿದಂತೆ ಸಮಸ್ತ ಕೋಟೂರ ,ವಿಭೂತಿ,ಮತ್ತು ಸಾಹಿತಿಕ ಸ್ನೇಹಿತರು ವಿದ್ಯಾವರ್ಧಕ ಸಂಘ ಮತ್ತು ಇತರ ಹಲವಾರು ಸಂಘ ಸಂಸ್ಥೆಗಳು ಇವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಶೃದ್ಧಾಂಜಲಿ ಸಲ್ಲಿಸಿದರು .
ಅಪ್ರತಿಮ ಪ್ರತಿಭೆಯ ಲಿಂಗೈಕ್ಯ ಡಾ ರೇಖಾ ಕೋಟೂರ ಇವರ ಸ್ಮರಣಾರ್ಥ ಶ್ರೀ ಮಲ್ಲಿಕಾರ್ಜುನ ಕೋಟೂರ ಅವರು ವಚನ ಅಧ್ಯಯನ ವೇದಿಕೆಯಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದಾರೆ.
ಪ್ರಯುಕ್ತ ಇದೆ ರವಿವಾರ 23 july 2023 ವಚನ ಅಧ್ಯಯನ ವೇದಿಕೆಯ ಗೂಗಲ್ ಮೀಟನಲ್ಲಿ ಸಂತ್ಶ ಶಿಶುನಾಳರೀಫರ ಮೇಲೆ ವಚನ ಸಾಹಿತ್ಯದ ಪ್ರಭಾವ ಎಂಬ ವಿಷಯದ ಮೇಲೆ ಪ್ರೊ ಚಂದ್ರಪ್ರಭ ಬಾಗಲಕೋಟ ಇವರು ಬೆಳಿಗ್ಗೆ ಈ ಕೆಳಗಿನ ಲಿಂಕ ಮೂಲಕ ಮಾತನಾಡಲಿದ್ದಾರೆ
ಎಂದು ವಚನ ಅಧ್ಯಯನ ವೇದಿಕೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಅಧ್ಯಕ್ಷರಾದ ಡಾ ಶಶಿಕಾಂತ ಪಟ್ಟಣ ಅವರು ತಿಳಿಸಿದ್ದಾರೆ

GoogleMeet Link – https://meet.google.com/aum-ikxp-eod
GoogleMeet Code – aum-ikxp-eod


ಡಾ ಶಶಿಕಾಂತ ಪಟ್ಟಣ

Leave a Reply

Back To Top