ಜಯ ಹುನಗುಂದ ಕವಿತೆ-ಧನ್ಯತೆ

ಕಾವ್ಯ ಸಂಗಾತಿ

ಜಯ ಹುನಗುಂದ

ಧನ್ಯತೆ

ಎಳೆಯ ನಾನು
ಮುಗ್ಧ ಬಾಲೆ
ಇರುಳ ಕನಸಲಿ
ನಿನ್ನ ಕಂಡೆನು
ಹಾಲು ಚೆಲ್ಲಿದ
ಬೆಳಗು ಚಂದಿರ
ಹಬ್ಬ ಸಂತಸ
ಬೆಳದಿಂಗಳ
ಕಾಡಿನಲ್ಲಿ
ಪಕ್ಷಿ ಇಂಚರ
ಸ್ನೇಹ ಪ್ರೀತಿಯ
ಸಂಭ್ರಮ
ಐದು ದಶಕದ
ದೂರ ಪಯಣದಿ
ಬಳಲಿ ಬೆಂದಿಹ
ಹಂದರ
ನೊಂದ ಜೀವಕೆ
ಒಲುಮೆ ತಂಪು
ನೆರಳು ಪ್ರೇಮದ
ಮನ್ವಂತರ
ಹೇಗೆ ಹೇಳಲಿ
ನಿನಗೆ ಧನ್ಯತೆ
ನನ್ನ ಪ್ರೀತಿಯ

ಚಂದಿರ


ಜಯ ಹುನಗುಂದ ಆಸ್ಟ್ರೇಲಿಯಾ

2 thoughts on “ಜಯ ಹುನಗುಂದ ಕವಿತೆ-ಧನ್ಯತೆ

Leave a Reply

Back To Top