ಡಾ.ಸುಮತಿ ಪಿ ಕಾರ್ಕಳ ಸಣ್ಣ ಕಥೆ-ಒಲವಿನ ಕಾಣಿಕೆ

ಕಥಾ ಸಂಗಾತಿ

ಡಾ.ಸುಮತಿ ಪಿ ಕಾರ್ಕಳ

ಒಲವಿನ ಕಾಣಿಕೆ

ರಾಜೇಶ ಶ್ರೀಮಂತ ಮನೆತನದಲ್ಲಿ ಹುಟ್ಟಿದವನು.ರಾಮ ಮತ್ತು ರಾಗಿಣಿ ದಂಪತಿಯ ಒಬ್ಬನೇ ಮಗ ರಾಮನಿಗೆ ತಿಂದು ಕೊಳೆಯುವಷ್ಟು ಸಂಪತ್ತಿತ್ತು.ರಾಜೇಶನ ಮನೆಯ ಪಕ್ಕದಲ್ಲೇ ಸಣ್ಣ ಗುಡಿಸಲಿನಲ್ಲಿ ಸಣ್ಣ ಹುಡುಗಿ ಸುಮ ಮತ್ತು ಅವಳ ತಾಯಿ ವಾಸಮಾಡುತ್ತಿದ್ದರು.ಸುಮಳ ತಾಯಿ ರಾಜೇಶನ ಮನೆಯಲ್ಲಿ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಆಗ ಸುಮ ಕೂಡ ತಾಯಿಯೊಂದಿಗೆ ರಾಜೇಶನ ಮನೆಗೆ ಹೋಗುತ್ತ,ರಾಜೇಶನೊಂದಿಗೆಪರಿಚಯ ಆಗಿತ್ತು.

ಒಂದು ದಿನ ಸುಮ ರಾಜೇಶನ ಮನೆಯಲ್ಲಿ ಮುತ್ತಿನ ಸರ ನೋಡಿ ನನಗಿದು ಬೇಕು,ಕೊಡ್ತಿಯಾ ಎಂದಳು.ಆಗ ರಾಜೇಶನಿಗೆ ಸುಮಾಳಿಗೆ ಮುತ್ತಿನ ಸರದ ಮೇಲಿನ ಇದ್ದ ಆಸೆ ನೋಡಿ “ಇಲ್ಲ” ಎಂದು ಹೇಳಲು ಮನಸ್ಸು ಬರಲಿಲ್ಲ.ಮುತ್ತಿನ ಬೆಲೆಯೂ ಅವಳಿಗೆ ಗೊತ್ತಿರಲಿಲ್ಲ.ಅಂಗಡಿಗಳಲ್ಲಿ ಇಡುತ್ತಿದ್ದ ಮಣಿಸರ ಎಂದೆಣಿಸಿದ್ದಳು.
ರಾಜೇಶ್ ಹಿಂದೆ ಮುಂದೆ ನೋಡದೆ ಪ್ರೀತಿಯಿಂದ ಕೊಟ್ಟುಬಿಟ್ಟ.ಸುಮ ಅದನ್ನು ಕುತ್ತಿಗೆಗೆ ಹಾಕಿಕೊಂಡಳು.ಬಹಳ ಖುಷಿ ಪಟ್ಟಳು.ಅವಳ ಖುಷಿಯನ್ನು ಕಂಡು ರಾಜೇಶ್ ಮನಸ್ಸು ಯೋಚನೆ ಮಾಡತೊಡಗಿತು.ದೇವರು ಯಾರಿಗೂ ಅನ್ಯಾಯ ಮಾಡಲಾರ. ಆ ಮುತ್ತಿನ ಸರ ನನ್ನ ಮನೆಯಲ್ಲಿ ಇದ್ದರೂ ಒಂದೆ.ಇಲ್ಲದಿದ್ದರೂ ಒಂದೆ.ನನಗದರಿಂದ ಏನು ಖುಷಿ ಸಿಗದು.ಸುಮಳಿಗೆ ಅದರ ಮೌಲ್ಯ ತಿಳಿಯದು.ಅವಳಿಗೆ ನಾನು ಕೊಟ್ಟಿದ್ದರಿಂದ ಸಿಕ್ಕಿದ ಸಂತೋಷ ಹಿರಿದು ಎಂದುಕೊಂಡ.ಅಂದಿನಿಂದ ರಾಜೇಶನಿಗೆ ಸುಮಳ ಮೇಲೆ ಅದೇನೊ ಆಕರ್ಷಣೆ ಹುಟ್ಟಿತು.ಸುಮ ಕೂಡ ರಾಜೇಶನನ್ನು ತುಂಬ ಗೌರವದಿಂದ ಕಾಣುತ್ತಿದ್ದಳು.

ಸುಮಾಳ ಕುತ್ತಿಗೆಯಲ್ಲಿದ್ದ ಮುತ್ತಿನ ಹಾರವನ್ನು ಎಲ್ಲರೂ ಮಣಿಸರವೆಂದೇ ತಿಳಿದಿದ್ದರು. ಕೆಲವು ತಿಂಗಳ ನಂತರ ಸುಮಳ ಚಿಕ್ಕಮ್ಮನಿಗೆ ಮೈ ಹುಷಾರು ತಪ್ಪಿದ್ದರಿಂದ ಅವರು ಊರಿಗೆ ಹೊರಟು ಹೋಗಬೇಕಾಯಿತು.ಮತ್ತೆ ಕೆಲವು  ವರ್ಷಗಳವರೆಗೆ ರಾಜೇಶನಿಗೆ ಸುಮಳ ಸಂಪರ್ಕ ಆಗಲಿಲ್ಲ.
ತಾನು ಮೆಡಿಕಲ್ ಮುಗಿಸಿ,ಉನ್ನತ ಅಧ್ಯಯನ ಮಾಡಿ ದೂರದ ಹಳ್ಳಿಯೊಂದರಲ್ಲಿ ಆಸ್ಪತ್ರೆಯಲ್ಲಿ ಸೇವೆಗೆ ಸೇರಿದ.ರಾಜೇಶನ ಮನೆಯಲ್ಲಿ ರಾಜೇಶನಿಗೆ ಮದುವೆ ಮಾಡಬೇಕೆಂದು ಹುಡುಗಿ ಹುಡುಕುತ್ತಿದ್ದರು.ಆದರೆ ಹುಡುಗಿ ಹೊಂದಾಣಿಕೆ ಆಗಿರಲಿಲ್ಲ.  

 ರಾಜೇಶ್ ನ ವಾಸ್ತವ್ಯದ ಮನೆಗೆ ಒಬ್ಬಳು ಮನೆಕೆಲಸಕ್ಕೆ ಬೇಕೆಂದಾಗ,ಆ ಊರಿನ ಹಿರಿಯರೊಬ್ಬರು,”ನಮ್ಮನೆ ಹತ್ತಿರ ಅನಾಥೆ ಹುಡುಗಿಯೊಬ್ಬಳು ಇದ್ದಾಳೆ.ತುಂಬ ಪಾಪದ ಹುಡುಗಿ,ನಾಳೆ ಕಳಿಸುತ್ತೇನೆ”ಎಂದರು.ಮರುದಿನ ರಾಜೇಶ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಆ ಹುಡುಗಿಯನ್ನು ಕಳಿಸಿದರು.ರಾಜೇಶನಿಗೆ ಆಶ್ಚರ್ಯ ತಾನು ಮುತ್ತಿನ ಸರ ಕೊಟ್ಟ ಸುಮ.
ಸುಮಾಳಿಗೆ ಕೂಡ ತುಂಬಾ ಸಂತೋಷ.ರಾಜೇಶನನ್ನು ನೋಡಿದವಳೇ “ದಣಿಯೋರ ನೀವಿಲ್ಲಿ!  ನೋಡಿ ನೀವು ಅಂದು ಕೊಟ್ಟ ಮಣಿಸರ ಇನ್ನೂ ಐತೆ”ಎಂದು ಕುತ್ತಿಗೆಯಿಂದ ತೆಗೆದು ತೋರಿಸಿದಳು.ಅಂದು ಚಿಕ್ಕ ಹುಡುಗಿ,ಇಂದು ಬೆಳೆದು ಅರಳಿದ ಹೂವಂತೆ ಸೌಂದರ್ಯದಲಿ ಮನಸೆಳೆಯುತ್ತಿದ್ದಳು.ಅವಳ ಅಮ್ಮನ ಸಾವಿನ ನಂತರ ಸುಮ ಒಂಟಿಯಾಗಿ ಇರುವ ವಿಚಾರ ತಿಳಿದು  ರಾಜೇಶನಿಗೆ ಕನಿಕರ ಹುಟ್ಟಿತು.ತಾನೇಕೆ ಅವಳಿಗೆ ಬಾಳು ಕೊಡಬಾರದು?ಎಂದೆಣಿಸಿ ಮನೆಯವರಿಗೆ ತಿಳಿಸಿ ಸುಮಳನ್ನು ಮದುವೆಯಾದ.ಮುತ್ತಿನ ಸರ ಮಣಿಸರವಾಗಿದ್ದರೂ,ಒಲವಿನ ಸರವಾಗಿ ಅವರನ್ನು ಒಂದುಗೂಡಿಸಿತು.


ಡಾ.ಸುಮತಿ ಪಿ ಕಾರ್ಕಳ

Leave a Reply

Back To Top