ಲಲಿತಾ ಪ್ರಭು ಅಂಗಡಿ,ಚುಟುಕುಗಳ ಕುಟುಕುಗಳು

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ಚುಟುಕುಗಳ ಕುಟುಕುಗಳು

ಶಬ್ಧಗಳ ಮುನಿಸು.

ಯಾಕೋ ಏನೋ ಗೊತ್ತಿಲ್ಲ ಇತ್ತೀಚಿಗೆ
ಶಬ್ಧಗಳೆ ಹೊರಬರುತ್ತಿಲ್ಲ
ಮುನಿಸಿಕೊಂಡಂತೆ ಕಾಣುತ್ತವೆ
ಆಗೊಮ್ಮೆ ಈಗೊಮ್ಮೆ ಬಳಸಿದರೆ
ನಾವೇಕೆ ಹೊರಬರಬೇಕು ಎಂಬಸಿಟ್ಟಂತೆ
ದಿನ ಬಳಸಿ ನಗಿಸಿದರೆ ನಲಿದಾಡಬಹದೆಂಬ
ಅವುಗಳ ಲೆಕ್ಕಾಚಾರವಂತೆ.

ಪ್ರೀತಿಯ ತೊಡಿಗೆ.


ಬಂಧನಗಳ ಭಾವದೊಲುಮೆಯಲಿ
ಬಿರುಕು ಬಿಟ್ಟರೆ ಬಾಳೆಲ್ಲ ಗೋಳು
ಒಲುಮೆಯ ಮನಕೆ ಪ್ರೀತಿಯ ತೊಡಿಗೆ
ಹೊದಿಸಿದರೆ
ಸುಖಸೋಪಾನದ ಸೊಗಡಿನ ಬೀಡು .

ಹೂಮಾಲೆ.


ತನ್ಇನಿಯನಿಂದ ಅನುಭವಿಸಿದ ನೋವನು
ಕತೆಯಾಗಿ ಬರೆಯಬೇಕೆಂದ ನಲ್ಲೆ
ಕಣ್ಣೀರಿನ ಹನಿಗಳ ಒಂದೊಂದು ಮುತ್ತಿನಿಂದ
ಪೋಣಿಸಿಬಿಟ್ಟಳು ಕವನಗಳ ಹೂಮಾಲೆ.

—-

ನತ್ತು.


ನಾ ಇಟ್ಟ ಮೂಗಿನ ನತ್ತು
ನನ ನಲ್ಲನ ಮನಸೆಳೆದಿತ್ತು
ಕಣ್ಸನ್ನೆಯ ಅವನ ನೋಟಕೆ
ಗಲ್ಲ ನಾಚಿ ನೀರಾಗಿತ್ತು
ಮನವೆಲ್ಲ ರಂಗೇರಿತ್ತು.

—-

ಕಾಲನ ದ್ರೃಷ್ಟಿ,


ಯಾವ ಕಾಲಕೆ ಯಾರ ಮೇಲೆ ಇದೆಯೊ
ಕಾಲನ ದ್ರೃಷ್ಟಿ
ನೋವು ನಲಿವುಗಳ ತನ್ನೊಡಲಿನ ನಿಸರ್ಗದ ಸ್ರೃಷ್ಟಿ.
ಆದರೂ ಮನುಜ ಬಿಡಲೊಲ್ಲ ತಾ ಮುಂದು ನಾ ಮುಂದು ಎನ್ನುವ ಕುಸ್ತಿ
ವಿಧಿಯಾಟವೆ ನಿರ್ಣಯಿಸುವುದು ನಮ್ಮೊಳಗಿನ ಅದ್ರೃಷ್ಟ ದುರಾದ್ರೃಷ್ಟದ ಶಕ್ತಿ.


ಲಲಿತಾ ಪ್ರಭು ಅಂಗಡಿ.

Leave a Reply

Back To Top