ಪ್ರಭಾ ಅಶೋಕ ಪಾಟೀಲ ಕವಿತೆ-ಎತ್ತ ಸಾಗಿದೆ ಬದುಕು

ಕಾವ್ಯ ಸಂಗಾತಿ

ಪ್ರಭಾ ಅಶೋಕ ಪಾಟೀಲ

ಎತ್ತ ಸಾಗಿದೆ ಬದುಕು

ಆಧುನಿಕತೆಯ ಆರ್ಭಟದಲಿ
ಸ್ವಚ್ಛಂದ ಸ್ವಾತಂತ್ರ್ಯದ ಹೆಸರಿನಲಿ
ನಾನೇ ಮೇಲೆಂಬ ಅ ಹಂನಲಿ
ಕಾಲನ ಅಡಿಯಲಿ ನಲಗುತಲಿ

ಸಂಸ್ಕಾರದ ಕೊಂಡಿ ಕಳಚಿದೆ
ಕುಟುಂಬ ವ್ಯವಸ್ಥೆ ನಲುಗಿದೆ
ನೆಮ್ಮದಿ ಯಮನ ಕಾಣದಾಗಿದೆ
ಆಡಂಬರಕ್ಕೆ ಮನಸೋಲುತಿದೆ

ಮನವು ಹುಚ್ಚು ಕುದುರೆಯಾಗಿದೆ
ಸ್ಪರ್ಧೆ ಗಾಗಿ ಬದುಕು ಸಾಗಿದೆ
ಪೈಪೋಟಿಗೆ ಮಾನವೀಯತೆ ನಲುಗಿದೆ
ವಿಕೃತ ಮನವು ವಿಜ್ರಂಭಿಸಿದೆ

ಅತಿ ಆಸೆಯ ಮಾಯಾ ಜಿಂಕೆ ಗೆ
ಸಂಯಮ ಎಂಬ ಕಡಿವಾನ ಹಾಕಿ
ಸತ್ಯ ಶುದ್ಧ ಕಾಯಕವ ಮಾಡುತ
ಸಮಾಜದ ಏಳಿಗೆಗಾಗಿ ಬದುಕಬೇಕಿದೆ


ಪ್ರಭಾ ಅಶೋಕ ಪಾಟೀಲ

Leave a Reply

Back To Top