ಅಮ್ಮು ರತನ್ ಶೆಟ್ಟಿ ಕವಿತೆ- ಪಾತರಗಿತ್ತಿ

ಕಾವ್ಯ ಸಂಗಾತಿ

ಪಾತರಗಿತ್ತಿ

ಅಮ್ಮು ರತನ್ ಶೆಟ್ಟಿ

ಪೃಕೃತಿಯ ಮಡಿಲಲ್ಲಿ ಸಂಭ್ರಮಿಸುವ ಪಾತರಗಿತ್ತಿ
ಅತ್ತಿಂದಿತ್ತ ಸಂಚರಿಸುವ ನೀ ಬಲು ಇಷ್ಟವಾಗುತ್ತಿ !!

ಅಳುವ ಕಂದನ ಮೊಗದಿ ಮಂದಹಾಸ ಬೀರಿದೆ
ಸಪ್ತ ಬಣ್ಣಗಳಲ್ಲಿ ಮನವ ಸೆಳೆದೆ !!

ಕಾಮನಬಿಲ್ಲಿನ ರಂಗಿನಾಟ ಒಮ್ಮೆಗೇ
ರೆಕ್ಕೆಗಳೇ ಹೋದರೆ ನೀ ಬರಿಯ ಹುಳುವೇ!!

ಶೃಂಗಾರದಲ್ಲಿ ಹೆಣ್ಣಿನಂದಕೆ ಸವಾಲಿನಂತೆ ನೀ
ಬಣ್ಣದ ಸೀರೆಗೂ ಮಿಗಿಲಾದ ಅಂದಗಾತಿ !!

ಹೂವಿಂದ ಹೂವಿಗೆ ಹಾರುವ ನೀನಾಗುವ ಬಯಕೆ
ಆಗಸದೆತ್ತರಕ್ಕೆ ಹಾರುವ ನೀ ಅದೆಷ್ಟು ಚೆಂದವೇ!!

ಮಕ್ಕಳಿಗೆ ಆಟಿಕೆಯಾದೆ, ಹೆಣ್ಣಿಗೆ ಕನಸುಗಳಾದೆ
ಪಾತರಗಿತ್ತಿ ನೀ ಪ್ರೇಮ ಲೋಕಕೆ ಕಲ್ಪನೆಯಾದೆ !!


ಅಮ್ಮು ರತನ್ ಶೆಟ್ಟಿ

One thought on “ಅಮ್ಮು ರತನ್ ಶೆಟ್ಟಿ ಕವಿತೆ- ಪಾತರಗಿತ್ತಿ

Leave a Reply

Back To Top