ಜಯ ಹುನಗುಂದ ಆಸ್ಟ್ರೇಲಿಯಾ ಕವಿತೆ-ಮೌನವೇನಿದು,?

ಕಾವ್ಯ ಸಂಗಾತಿ

ಮೌನವೇನಿದು,?

ಜಯ ಹುನಗುಂದ ಆಸ್ಟ್ರೇಲಿಯಾ

ಮೌನವೇ ಭಾವ
ಮೌನವೇ ಮಾತು
ಮೌನವೇ ಮುನಿಸು
ಮೌನವೇ ಹಾಸ್ಯ
ಮೌನವೇ ಲಾಸ್ಯ
ಮೌನವೇ ಬಿಗುಮಾನ
ಮೌನವೇ ಬಹುಮಾನ
ಮೌನವೇ ಸರಸ ಸಲ್ಲಾಪ
ಮೌನವೇ ಪ್ರಲಾಪ
ಮೌನದಲ್ಲುಂಟು ನೂರೆಂಟು ಅರ್ಥ
ಮೌನದಲಿ ಸಾವಿರಾರು ಯೋಚನೆ
ಮೌನದಲಿ ಉಸಿರು
ಮೌನದಲಿ ಮಳೆ
ಮೌನ ಮೋಡ ಬೀಜ ಬಿತ್ತಿ
ಚಿಗುರುವುದು ನೆಲ ಹಸಿರು
ದೂರದ ಊರಿನ ಚೆಲುವ
ಓ ಚಂದಿರ, ಈಗ ಹೇಳು
ಮೌನವೇ ಏನಿದು ?
ನಿನ್ನ ಮೌನಧೂತ
ಹೊಂಬೆಳಕಿನ ಮೌನದ

ನಿಜ ಅರ್ಥ


ಜಯ ಹುನಗುಂದ ಆಸ್ಟ್ರೇಲಿಯಾ

5 thoughts on “ಜಯ ಹುನಗುಂದ ಆಸ್ಟ್ರೇಲಿಯಾ ಕವಿತೆ-ಮೌನವೇನಿದು,?

  1. ಹೊಂಬೆಳಕಿನ ಮೌನದ ನಿಜ ಅರ್ಥವನ್ನು ನಿಮ್ಮ ಕವನದ ತುಂಬ ಮೌನವಾಗಿ ಮತ್ತು ಅಷ್ಟೇ ಸರಾಗ
    ವಾಗಿ ನಿಮ್ಮ ಪ್ರೀತಿ ತುಂಬಿದ ಭಾಷೆಯಲ್ಲಿ ವ್ಯಕ್ತ
    ಪಡಿಸಿದ್ದೀರಿ… ಜಯಾ ಮೇಡಂ

  2. ಅಧ್ಬುತ ಕವನ ಮೌನದ ಶಕ್ತಿ ಅನಾವರಣ ಗೊಳಿಸಿದ ನಿಮ್ಮ ಕಾವ್ಯ ಶೈಲಿ ಅತ್ಯಂತ ಸುಂದರ

  3. ದೂರದ ಊರಿನ ಚೆಲುವ
    ಓ ಚಂದಿರ…
    ಮೌನವೇ ಏನಿದು?
    ಮೌನದ ಅರ್ಥ ಆ ಚಂದಿರನೇ
    ಹೇಳಬೇಕು….ಅಲ್ಲವೇ….
    ಸುಂದರ ಭಾವ….

Leave a Reply

Back To Top