ಇಮಾಮ್ ಮದ್ಗಾರ ಕವಿತೆ-ಆರುಮೆಯಾಸೆ

ಕಾವ್ಯ ಸಂಗಾತಿ

ಆರುಮೆಯಾಸೆ

ಇಮಾಮ್ ಮದ್ಗಾರ

ಪ್ರೀತಿಯ ದೀಪ
ಬೆಳಗದಿದ್ದರೆ ನನ್ನ
ಹೃದಯದರ ಮನೆಗೆ
ಬೆಳಕು ಬರುವದು ಹೇಗೆ ?

ಪ್ರೀತಿಯ ಮೋಡ
ಮಳೆ ಸುರಿಸದಿದ್ದರೆ
ನನ್ನ ಹೃದಯದ ತೋಟ
ಹಸಿರಾಗುವದು ಹೇಗೆ ?

ಪ್ರೀತಿಯ ನಕ್ಷತ್ರ
ಹೊಳೆಯದಿದ್ದರೆ
ನನ್ನೆದೆಯ ಚಂದಿರ
ಪ್ರಕಾಶಿಸುವದು ಹೇಗೆ ?

ನಂಗೊತ್ತು ಪ್ರತಿ
ಮುಂಜಾವೂ..
ಇಬ್ಬನಿಯ ಹೊತ್ತು
ತರುವದಿಲ್ಲ

ಪ್ರೀತಿಗೆ ಕಾಯುವ
ಕಠಿಣ ಶಿಕ್ಷೆಯೇನೂ..
ಹೊಸದಲ್ಲ

ಆರುಮೆಯ ಆಸೆಗಳು
ಅಸು ನೀಗ ಬಾರದು ಇಮಾಂ


ಇಮಾಮ್ ಮದ್ಗಾರ

Leave a Reply

Back To Top