ಕಾವ್ಯ ಸಂಗಾತಿ
ಚಂದಕಚರ್ಲ ರಮೇಶಬಾಬು
ಮೂರು ಪುಟ್ಟ ಕವಿತೆಗಳು
ಉಪಕಾರಿ
ದುಮ್ಮಿಕ್ಕಿ ಬರುತ್ತಿರುವ
ತನ್ನ ವೇಗಕ್ಕೆ
ಅಡ್ಡ ಬಂದ ಬಂಡೆಗೆ
ಸಿಟ್ಟಿನಿಂದ ಹಾದು
ಕಾಮನ ಬಿಲ್ಲನ್ನು
ಸೃಷ್ಟಿಸಿತ್ತು ನದಿ
*ಮಳೆ
ವಿರಹಿಗಳ
ಸಂದೇಶಗಳ
ಭಾರಹೊತ್ತ ಮುಗಿಲುಗಳು
ಉಮ್ಮಳ ತಾಳಲಾರದೇ
ಬಿಕ್ಕಳಿಸಿ ಅತ್ತಾಗ
ನಮಗೆಲ್ಲಾ ಮಳೆ
****
ಕವಿತೆ
ಅನುಭವಗಳ
ಸುಮಗಳ ಸುತ್ತ
ಭಾವನೆಗಳ ಭ್ರಮರಗಳು
ಮೆತ್ತಿಕೊಂಡ
ಪರಾಗದ ಅದೃಷ್ಟ
ಕವಿತೆಯಾಗಿದ್ದು
****
ವಿಸ್ಮಯ
ಆಕಾಶ ಒಂದು ಅಕ್ಷಯ ಪಾತ್ರೆ
ಎಷ್ಟು ಪ್ರೇಮಿಗಳು
ಚಂದ್ರ ತಾರೆಯರನ್ನು
ಭುವಿಗಿಳಿಸಿದರೂ
ಬಾನಿನಲ್ಲಿ
ಬೆಳಗುತ್ತಲೇ ಇರುತ್ತವೆ
ಭಾವನೆಗಳ ಮಜಲು
ಭಾವನೆಗಳ ಗಮ್ಯಸ್ಥಾನ ಎರಡು ರೀತಿ
ಸುಮಗಳಂತೆ ಅರಳಿ
ಪುಟಗಳಲ್ಲಿ ಚೆಲ್ಲಿಕೊಂಡು
ಸಾಹಿತ್ಯಸೌರಭ ಬೀರುವುದೊಂದಾದರೆ
ಅರೆಬರೆ ರೂಪತಾಳಿ
ಹೊರಬರಲಾರದೇ
ತಿಣುಕಿ ಮುರುಟಿಹೋಗುವುದು ಮತ್ತೊಂದು
—————————-
ಚಂದಕಚರ್ಲ ರಮೇಶಬಾಬು
ಮೂರು ಚಂದದ ಹನಿಗವಿತೆಗಳು.
ಶುಭವಾಗಲಿ