ಕಾವ್ಯ ಸಂಗಾತಿ
ಕಂಚುಗಾರನಹಳ್ಳಿ ಸತೀಶ್
ಗಜಲ್
ಹಾದಿ ಬೀದಿಯಲ್ಲಿ ಅರಿವಿಲ್ಲದೆ ಅಲೆದಾಡಿದೆ ನನ್ನವಳು ನಕ್ಕಾಗ
ಹಣವಿಲ್ಲದೆ ಅಂಗಡಿಯ ಮಾಲೀಕನ ಹುಡುಕಾಡಿದೆ ನನ್ನವಳು ನಕ್ಕಾಗ
ಇಂಗು ತೆಂಗು ಇದ್ದರೆ ಮಂಗವು ಅಡಿಗೆ ಮಾಡುಬಹುದಂತೆ ನಿಜವೇ
ಪಂಚರಂಗಿಯ ಹಿಂದೆ ಮುಂದೆ ಪರಿತಪಿಸಿ ಸುಳಿದಾಡಿದೆ ನನ್ನವಳು ನಕ್ಕಾಗ
ಮರದಲ್ಲಿ ಅರಳುವ ಸಂಪಿಗೆ ಪರಿಮಳದಂತೆ ಘಮಘಮಿಸುವೆ
ಪ್ರೀತಿಯ ಅಮಲೇರಿ ಹುಚ್ಚನಂತೆ ತಡಕಾಡಿದೆ ನನ್ನವಳು ನಕ್ಕಾಗ
ಮನಸೆಂಬ ಮಂದಿರದಲ್ಲಿ ನೆಮ್ಮದಿಯ ಹುಡುಕುತ್ತಾ ಬಂದಳು
ಹಗಲು ಇರುಳು ಎನ್ನದೆ ನಿದ್ದೆಗಣ್ಣಲ್ಲೇ ನಡೆದಾಡಿದೆ ನನ್ನವಳು ನಕ್ಕಾಗ
ಚದುರಂಗಿ ಮಾತು ನಿಲ್ಲಿಸಿ ಭಜರಂಗಿಯ ಭಕ್ತ ಕಂಸನ ಬಳಿ ಬಂದಳು
ಹಂಗಿಸಿದ ಅಪರಿಚಿತ ಪೋಲಿಗಳೊಂದಿಗೆ ಬಡಿದಾಡಿದೆ ನನ್ನವಳು ನಕ್ಕಾಗ
ಕಂಚುಗಾರನಹಳ್ಳಿ ಸತೀಶ್